ಅಮೆರಿಕ ವಿದೇಶಾಂಗ ಇಲಾಖೆ ಹಂಗಾಮಿ ವಕ್ತಾರರಾದ ಪಟೇಲ್

ವಾಷಿಂಗ್ಟನ್, ಮಾ.10- ಭಾರತೀಯ ಮೂಲದ ವೇದಾಂತ್ ಪಟೇಲ್ ಅವರು ಅಮೆರಿಕ ವಿದೇಶಾಂಗ ಇಲಾಖೆಯ ಹಂಗಾಮಿ ವಕ್ತಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಹಾಲಿ ವಕ್ತಾರರಾಗಿರುವ ನೆಡ್ ಪ್ರೈಸ್ ಅವರು ಈ ತಿಂಗಳು ನಿವೃತ್ತರಾಗಲಿದ್ದು, ಅವರ ಸ್ಥಾನದಲ್ಲಿ ಭಾರತೀಯ ಮೂಲದ ಅಮೆರಿಕನ್ ಪಟೇಲ್ ಮುಂದುವರೆಯಲಿದ್ದಾರೆ ಎಂದು ತಿಳಿದುಬಂದಿದೆ. ಅಮೆರಿಕ ವಿದೇಶಾಂಗ ಇಲಾಖೆ ಹಂಗಾಮಿ ವಕ್ತಾರರಾಗಿ ಪಟೇಲ್ ಅವರು ಮುಂದುವರೆಯಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಪ್ರಕಟಿಸಿದ್ದಾರೆ. 2021ರಿಂದ ನೆಡ್ ಪ್ರೈಸ್ ಅವರು ಯುಎಸ್ ಡಿಪಾಟ್ರ್ಮೆಂಟ್ ಆಫ್ ಸ್ಟೇಟ್ ವಕ್ತಾರರಾಗಿ ಕೆಲಸ […]