ಲುಂಪಿ ಸೋಂಕಿಗೆ ಅಸುನೀಗಿದ 20 ಸಾವಿರಕ್ಕೂ ಹೆಚ್ಚು ಜಾನುವಾರುಗಳು

ಅಹಮದಾಬಾದ್,ಆ.1-ಮಾರಣಾಂತಿಕ ಲುಂಪಿ ಚರ್ಮದ ಕಾಯಿಲೆಗೆ ತುತ್ತಾಗಿ ಗುಜರಾತ್‍ನಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಹಸುಗಳು ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ. ಗುಜರಾತ್‍ನ 33 ಜಿಲ್ಲೆಗಳ ಪೈಕಿ 17 ಜಿಲ್ಲೆಗಳಲ್ಲಿ ಈ ಸಾಂಕ್ರಾಮಿಕ ರೋಗ ವ್ಯಾಪಿಸಿದೆ. ಗುಜರಾತ್‍ನ ಕೃಷಿ ಮತ್ತು ಪಶು ಸಂಗೋಪನಾ ಸಚಿವ ರಾಘವ್ ಜೀ ಪಟೇಲ್ ಅವರ ಹೇಳಿಕೆಯ ಪ್ರಕಾರ 1240ಕ್ಕೂ ಹೆಚ್ಚು ಹಸುಗಳು ಸೋಂಕಿನಿಂದ ಮೃತಪಟ್ಟಿವೆ. 5.74 ಲಕ್ಷ ಹಸುಗಳಿಗೆ ಲಸಿಕೆ ಹಾಕಲಾಗಿದೆ. ಸೌರಾಷ್ಟ್ರ ಭಾಗದ ಕಚ್, ಜಾಮ್ನಾಘರ್, ದೇವಭೂಮಿ ದ್ವಾರಕ, ರಾಜ್‍ಪುತ್, ಪೋರಬಂದರ್, ಸುರೇಂದ್ರ […]