ಬಾಂಗ್ಲಾ ಏಕದಿನ ಸರಣಿಯಿಂದ ರಿಷಭ್ ಪಂತ್ ಔಟ್

ಮಿರ್‍ಪುರ್, ಡಿ.4- ಭಾರತ ತಂಡದ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಅವರು ವೈದ್ಯಕೀಯ ಕಾರಣದಿಂದಾಗಿ ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಿಂದ ಹಿಂದೆ ಸರಿದಿದ್ದಾರೆ. ಬಿಸಿಸಿಐ ತಮ್ಮ ಅಧಿಕೃತ ಟ್ವಿಟ್‍ನಲ್ಲಿ ಈ ವಿಷಯ ತಿಳಿಸಿದ್ದು, ` ರಿಷಭ್ ಪಂತ್ ಅವರು ಆರೋಗ್ಯ ಸಮಸ್ಯೆಯಿಂದಾಗಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯಿಂದ ಅವರನ್ನು ಕೈಬಿಡಲಾಗಿದೆ. ಮೊದಲ ಪಂದ್ಯಕ್ಕೆ ಪಂತ್ ಸ್ಥಾನದಲ್ಲಿ ಯಾವೊಬ್ಬ ಬದಲಿ ಆಟಗಾರನಿಗೂ ಸ್ಥಾನ ಕಲ್ಪಿಸಿಲ್ಲ, ರಿಷಭ್ ಪಂತ್ ಅವರು ಬಾಂಗ್ಲಾದೇಶ […]

ಚುಟುಕು ವಿಶ್ವಕಪ್‍ನಲ್ಲಿ ಶಮಿ, ಸಿರಾಜ್, ಠಾಕೂರ್‌ಗೆ  ಅವಕಾಶ

ನವದೆಹಲಿ, ಅ.12- ಕಾಂಗರೂ ನಾಡಿನಲ್ಲಿ ನಡೆಯಲಿರುವ 8ನೆ ಚುಟುಕು ವಿಶ್ವಕಪ್‍ಗೆ ದಿನಗಣನೆ ಶುರುವಾಗಿರುವಾಗಲೇ ಭಾರತದ ತಂಡದಲ್ಲಿ ಗಾಯಾಳುಗಳ ಸಮಸ್ಯೆ ಹೆಚ್ಚಾಗುತ್ತಾ ಸಾಗುತ್ತಿದೆ. ತಂಡದ ಪ್ರಮುಖ ವೇಗಿ ಜಸ್‍ಪ್ರೀತ್ ಬೂಮ್ರಾ ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಸರಣಿಯಿಂದ ಹೊರಗುಳಿದಿದ್ದರು, ಅವರು ಇನ್ನೂ ಸಂಪೂರ್ಣವಾಗಿ ಫಿಟ್ನೆಸ್‍ಗೊಳ್ಳದ ಕಾರಣ ವಿಶ್ವಕಪ್‍ನಿಂದಲೂ ಹೊರ ನಡೆದಿದ್ದಾರೆ. ಅವರ ಸ್ಥಾನವನ್ನು ತುಂಬಬಲ್ಲ ಸಮರ್ಥ ಬೌಲರ್ ಎಂದು ಗುರುತಿಸಿಕೊಂಡಿದ್ದ ನೆಟ್ ಬೌಲರ್ ದೀಪಕ್ ಚಹರ್ ಕೂಡ ಗಾಯಗೊಂಡು ದಕ್ಷಿಣ ಆಫ್ರಿಕಾ ಸರಣಿಯಿಂದ […]

ವಿಶ್ವ ವಿಖ್ಯಾತ ದಸರಾ ಮಹೋತ್ಸವಕ್ಕೆ ಸಿದ್ಧತೆ ಆರಂಭ

ಮೈಸೂರು,ಆ.6- ವಿಶ್ವ ವಿಖ್ಯಾತ ದಸರಾ ಮಹೋತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಸಿದ್ಧತೆಗಳು ಆರಂಭವಾಗಿವೆ. ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಒಟ್ಟು 17 ಆನೆಗಳು ಅರ್ಹತೆ ಪಡೆದಿದ್ದು, ಸರ್ಕಾರ ಕೂಡ ಅನುಮೋದಿಸಿದೆ. ಜಂಬೂ ಸವಾರಿಯಲ್ಲಿ ಮಾತ್ರ 14 ಆನೆಗಳು ಭಾಗವಹಿಸಲಿವೆ. ನಾಳೆ ಬೆಳಿಗ್ಗೆ ದಸರಾ ಮಹೋತ್ಸವದ ಮುನ್ನುಡಿಯಾಗಿ ಗಜಪಯಣ ಆರಂಭವಾಗಲಿದೆ. ಕಳೆದೆರಡು ವರ್ಷಗಳಿಂದ ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಆಚರಣೆಗಷ್ಟೇ ಸೀಮಿತವಾಗಿದ್ದ ವಿಶ್ವವಿಖ್ಯಾತ ದಸರಾ ಮಹೋತ್ಸವ ಈ ಬಾರಿ ಅದ್ಧೂರಿಯಾಗಿ ನಡೆಯಲಿದೆ. ಈ ಬಾರಿ 14 […]