ಫೆ.20ರಂದು ಶೃಂಗೇರಿ ಮಠಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಭೇಟಿ

ಬೆಂಗಳೂರು, ಫೆ.16- ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಬಿಜೆಪಿ ಹೈಕಮಾಂಡ್ ನಾಯಕರು ಹೆಚ್ಚು ಭೇಟಿ ನೀಡುತ್ತಿದ್ದು, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಫೆ.20ರಂದು ಶೃಂಗೇರಿ ಮಠಕ್ಕೆ ಭೇಟಿ ನೀಡಲಿದ್ದಾರೆ. ಈಗಾಗಲೇ ಶೃಂಗೇರಿ ಮಠದ ಶ್ರೀಗಳ ಭೇಟಿಗೆ ಸಮಯಾವಕಾಶವನ್ನು ಜೆ.ಪಿ. ನಡ್ಡಾ ಕೇಳಿರುವ ವಿಚಾರ ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ.ಜಿಲ್ಲೆಯ ಶೃಂಗೇರಿ ಶಾರದಾ ಮಠಕ್ಕೆ ಫೆ.20ರಂದು ರಾತ್ರಿ ಜೆ.ಪಿ.ನಡ್ಡಾ ಭೇಟಿ ನೀಡಲಿದ್ದಾರೆ. ಶೃಂಗೇರಿ ಶಾರದಾಂಬೆ ದರ್ಶನದ ನಂತರ ಶ್ರೀ ಜಗದ್ಗುರುಗಳನ್ನು ಜೆ.ಪಿ.ನಡ್ಡಾ ಅವರು ಭೇಟಿಯಾಗಿ ಆಶೀರ್ವಾದ ಪಡೆಯಲಿದ್ದಾರೆ. ಅಂದು ಕೊಪ್ಪ […]