ಹೆಚ್‌ಡಿಕೆ ಅಡ್ಡಗಟ್ಟಿ ಶಾಲೆಗೆ ಕರೆದೊಯ್ದ ಮಕ್ಕಳು

ಕೋಲಾರ,ನ.23- ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ರೊಜರನಹಳ್ಳಿ ಕ್ರಾಸ್ ಮತ್ತು ಬಂಗವಾದಿ ಗ್ರಾಮದಲ್ಲಿ ನಡೆದ ಪಂಚರತ್ನ ರಥಯಾತ್ರೆಯ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ರಸ್ತೆಯಲ್ಲೇ ಅಡ್ಡಗಟ್ಟಿದ ಶಾಲಾ ಮಕ್ಕಳು ಸೋರುತ್ತಿರುವ ತಮ್ಮ ಶಾಲೆಯ ದರ್ಶನ ಮಾಡಿಸಿದ್ದಾರೆ. ಕುಮಾರಸ್ವಾಮಿ ಅವರನ್ನು ಶಾಲೆಗೆ ಕರೆದುಕೊಂಡು ಹೋದ ಮಕ್ಕಳು ಶ್ರೀನಿವಾಸಪುರ ಕ್ಷೇತ್ರದ ಮಾಸ್ತೇನಹಳ್ಳಿಯ ಶಾಲೆ ಸೋರುತ್ತಿರುವುದನ್ನು ತೋರಿಸಿದ್ದಾರೆ. ಸೋರುತ್ತಿರುವ ಶಾಲೆ, ಶಿಥಿಲವಾದ ಶಾಲಾ ಕಟ್ಟಡ ತೋರಿಸಿ ಮಕ್ಕಳು ಕಣ್ಣೀರಿಟ್ಟು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ರಸ್ತೆಯಲ್ಲೇ ಕುಮಾರಸ್ವಾಮಿ ಅವರನ್ನು ತಬ್ಬಿಕೊಂಡ ಶಾಲಾ ಮಕ್ಕಳು […]