”ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆಯಲು ಟಿಪ್ಪು ಜಯಂತಿ ಆಚರಣೆ ಕಾರಣ”
ಮೈಸೂರು, ಆ.20- ಮಳೆಹಾನಿ ಪ್ರದೇಶಗಳಲ್ಲಿ ಜನ ಮಳೆಯ ರೌದ್ರಾವತಾರಕ್ಕೆ ಮನೆ-ಮಠ ಕಳೆದುಕೊಂಡು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಭೇಟಿ ನೀಡದ ಮಾಜಿ ಸಿಎಂ ಸಿದ್ದ ರಾಮಯ್ಯನವರು ಈಗ ಭೇಟಿ ನೀಡಿ ಜನರ ಸಂಕಷ್ಟ ಆಲಿಸಲಿಲ್ಲ. ಅಲ್ಲದೆ, ಟಿಪ್ಪು ಜಯಂತಿ ಆಚರಣೆಗೆ ತಂದ ವಿಷಯದಲ್ಲೂ ಜನ ಆಕ್ರೋಶ ಗೊಂಡಿದ್ದರಿಂದ ಮೊಟ್ಟೆ ಎಸೆದ ಪ್ರಕರಣ ನಡೆದಿರಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಹಾನಿ ಸಂದರ್ಭದಲ್ಲಿ ತಮ್ಮ 75ನೆ ವರ್ಷದ ಹುಟ್ಟುಹಬ್ಬ ಆಚರಣೆ ಸಂಭ್ರಮದಲ್ಲಿ ಸುಖದಲ್ಲಿ ತೇಲುತ್ತಿದ್ದರು. […]