ಮಂಗಳೂರು ಆಟೋ ಸ್ಪೋಟಕ್ಕೆ ತುಮಕೂರು ರೈಲ್ವೆ ಸಿಬ್ಬಂದಿ ಹೆಸರು ಲಿಂಕ್..!

ತುಮಕೂರು,ನ.20- ಮಂಗಳೂರಿನಲ್ಲಿ ಸಂಭವಿಸಿದ ಆಟೋ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರಿನ ರೈಲ್ವೆ ಸಿಬ್ಬಂದಿಯೊಬ್ಬರ ಹೆಸರು ತಳಕು ಹಾಕಿಕೊಂಡಿದ್ದು, ಸ್ಪೋಟ ಸಂಭವಿಸಿರುವ ಸ್ಥಳದಲ್ಲಿ ದೊರೆತಿರುವ ಗುರುತಿನಪತ್ರ ತುಮಕೂರಿನ ರೈಲ್ವೆ ಸಿಬ್ಬಂದಿಯದು ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಮೂಲತಃ ಹುಬ್ಬಳ್ಳಿ ಮೂಲಕ ಪ್ರೇಮರಾಜ್ ಹುಟಗಿ, ತುಮಕೂರಿನ ರೈಲ್ವೆ ವಿಭಾಗದಲ್ಲಿ ಟ್ರ್ಯಾಕ್‍ಮೆನ್ ಆಗಿ ಕೆಲಸ ಮಾಡುತ್ತಿದ್ದು, ಕಳೆದ ಎರಡು ವರ್ಷದಲ್ಲಿ ಎರಡು ಬಾರಿ ಆಧಾರ್‍ಕಾರ್ಡ್ ಕಳೆದುಕೊಂಡಿದ್ದ. ಮಂಗಳೂರಿನಲ್ಲಿ ನಡೆದಿರುವ ಆಟೋದಲ್ಲಿ ಸ್ಪೋಟ ಆದಾಗ ಅದರಲ್ಲಿ ಗುರುತಿನ ಪತ್ರವೊಂದು ದೊರೆಕಿದೆ. ಮಂಗಳೂರಿನ […]