ರಾತ್ರೋರಾತ್ರಿ ಮಾಯವಾದ 2 ಗೋಪುರಗಳು, ಗುಂಬಜ್ ವಿವಾದಕ್ಕೆ ತೆರೆ

ಮೈಸೂರು,ನ.27- ಬಸ್ ನಿಲ್ದಾಣದ ಮೇಲೆ ನಿರ್ಮಿಸಿದ್ದ ಗುಂಬಜ್ ವಿವಾದಕ್ಕೆ ತೆರೆ ಬಿದ್ದಿದೆ. ಮೈಸೂರು-ಊಟಿ ರಸ್ತೆಯಲ್ಲಿ ನಿರ್ಮಾಣ ಮಾಡಲಾಗಿದ್ದ ಬಸ್ ನಿಲ್ದಾಣದ ಮೇಲಿದ್ದ ಮೂರು ಗುಂಬಜ್‍ಗಳ ಪೈಕಿ ಎರಡು ಗುಂಬಜ್‍ಗಳನ್ನು ನಿನ್ನೆ ತಡರಾತ್ರಿ ಕಾರ್ಯಾಚರಣೆ ನಡೆಸಿ ತೆರವು ಮಾಡಲಾಗಿದೆ. ಮಧ್ಯದಲ್ಲಿರುವ ದೊಡ್ಡ ಗೋಪುರವನ್ನು ಬಿಟ್ಟು ಎಡ ಮತ್ತು ಭಾಗದಲ್ಲಿದ್ದ ಎರಡು ಚಿಕ್ಕ ಗೋಪುರಗಳನ್ನು ತೆರವು ಮಾಡಲಾಗಿದೆ. ಬಸ್ ನಿಲ್ದಾಣದ ಮೇಲಿನ ಗೋಪುರ ಗುಂಬಜ್ ಮಾದರಿ ಇದೆ ಎಂದು ಸಂಸದ ಪ್ರತಾಪ್ ಸಿಂಹ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಡಿ.ಕೆ.ಶಿವಕುಮಾರ್-ಸಿದ್ದರಾಮಯ್ಯ ರಹಸ್ಯ […]
ಗುಂಡಿಮಯವಾದ ಮೆಜೆಸ್ಟಿಕ್ : ಚಾಲಕರು, ಪ್ರಯಾಣಿಕರ ಪರದಾಟ

ರಾಜಧಾನಿ ಬೆಂಗಳೂರಿನ ಹೃದಯ ಭಾಗವಾದ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ಗುಂಡಿಗಳ ತಾಣವಾಗಿದ್ದು, ಇಲ್ಲಿ ಬಿಎಂಟಿಸಿ ಬಸ್ಗಳು ಚಲಿಸುವುದು ದುಸ್ತರವಾಗಿದೆ. ಬಸ್ನಿಲ್ದಾಣದಿಂದ ಒಳಗೆ ಅಥವಾ ಹೊರಗೆ ಹೋಗಬೇಕಾದರೆ ಬಸ್ ಒಳಗೆ ಕುಳಿತಿದ್ದವರು ಜೀವ ಅಂಗೈನಲ್ಲಿ ಹಿಡಿದುಕೊಂಡಿರಬೇಕಾಗುತ್ತದೆ. ಮೊಳಕಾಲುದ್ದದ ಗುಂಡಿಗಳಿಗೆ ಬಸ್ನ ಚಕ್ರಗಳು ಇಳಿದು ಹತ್ತುವಾಗ ವಾಹನಗಳು ಅಂತಿದ್ದಿತ್ತ ಇತ್ತಿಂದ್ದಂತ್ತ ವಾಲಾಡುತ್ತವೆ. ಎಲ್ಲಿ ಮಗುಚಿ ಬೀಳುತ್ತದೋ ಎಂಬ ಭಯವನ್ನು ಪ್ರಯಾಣಿಕರು ಪ್ರತಿ ನಿತ್ಯ ಅನುಭವಿಸುವಂತ್ತಾಗಿದೆ. ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಹೊರ ಹೋಗುವ ರಸ್ತೆಗಳಲ್ಲಿ ಗುಂಡಿಗಳ ಸಂಖ್ಯೆ ಹೆಚ್ಚಾಗಿದೆ. ಮೆಜೆಸ್ಟಿಕ್ […]
ಉಕ್ರೇನ್ ಮೇಲೆ ಅಣ್ವಸ್ತ್ರ ಪ್ರಯೋಗಿಸಲ್ಲ: ಪುಟಿನ್

ಮಾಸ್ಕೋ, ಅ.28- ಉಕ್ರೇನ್ ಮೇಲೆ ಪರಮಾಣು ಆಸ್ತ್ರ ಪ್ರಯೋಗಿಸುವ ಯಾವುದೇ ಉದ್ದೇಶವನ್ನು ರಷ್ಯಾ ಹೊಂದಿಲ್ಲ. ಅದರ ಅವಶ್ಯಕತೆಯೂ ಇಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಭಿಪ್ರಾಯಪಟ್ಟಿದ್ದಾರೆ. ಅಂತರಾಷ್ಟ್ರೀಯ ವಿದೇಶಾಂಗ ನೀತಿ ತಜ್ಞರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಕೆಲವು ಪಾಶ್ಚಿಮಾತ್ಯ ರಾಷ್ಟ್ರಗಳು ಉಕ್ರೇನ್ ಬೆಂಬಲಕ್ಕೆ ನಿಲ್ಲುವ ಮೂಲಕ ತಮ್ಮ ಇಬ್ಬಗೆ ನೀತಿ ಅನುಸರಿಸುತ್ತಿದ್ದಾರೆ. ಅಂತವರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಅವರ ಎಚ್ಚರಿಸಿದರು. ರಷ್ಯಾವನ್ನು ರಕ್ಷಿಸಲು ಲಭ್ಯವಿರುವ ಎಲ್ಲಾ ವಿಧಾನಗಳನ್ನು ಬಳಸಲು ಸಿದ್ದ ಎಂಬ ನಮ್ಮ ಹೇಳಿಕೆಯನ್ನು […]