BIG NEWS: 4ನೇ ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್, ನಿರುದ್ಯೋಗಿಗಳಿಗೆ ರೂ.3000 ಭತ್ಯೆ..!

ಬೆಂಗಳೂರು,ಮಾ.20- ಜನಸಾಮಾನ್ಯರನ್ನು ಸೆಳೆಯುವ ಜೀವನವಶ್ಯಕವಾದ ನಾಲ್ಕು ಭರವಸೆಗಳನ್ನು ಈಗಾಗಲೇ ನೀಡಿ ಜನಪ್ರಿಯತೆಯ ಉತ್ತುಂಗದಲ್ಲಿರುವ ಕಾಂಗ್ರೆಸ್, ಯುವ ಸಮುದಾಯದ ಸಬಲೀಕರಣಕ್ಕೆ ಇಂದು ಬೆಳಗಾವಿಯಲ್ಲಿ ನಿರುದ್ಯೋಗ ಭತ್ಯೆ ಘೋಷಣೆ ಮಾಡುವ ಮೂಲಕ ಗ್ಯಾರಂಟಿ ನಂಬರ್ ನಾಲ್ಕನ್ನು ಜನರ ಮುಂದಿಟ್ಟಿದೆ. ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ಇಂದು ಬೆಳಗಾವಿಯಲ್ಲಿ ಯುವ ಶಕ್ತಿ ಸಮಾವೇಶದಲ್ಲಿ ಭಾಗವಹಿಸಿ, ಕಾಂಗ್ರೆಸ್ ಪಕ್ಷದ ಯುವ ನಿಧಿ ಯೋಜನೆಯನ್ನು ಘೋಷಿಸಿದರು. ಅದರಲ್ಲಿ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3 ಸಾವಿರ, ಡಿಫ್ಲೋಮಾ ಪದವೀಧರರಿಗೆ ಮಾಸಿಕ ಒಂದುವರೆ ಸಾವಿರ ರೂಪಾಯಿ ಭತ್ಯೆಯನ್ನು […]
ಅಯೋಧ್ಯೆಯ ಧನ್ನಿಪುರದಲ್ಲಿ ಮಸೀದಿ ನಿರ್ಮಾಣಕ್ಕೆ ಅನುಮತಿ ನೀಡಿದ ಪ್ರಾಧಿಕಾರ

ಅಯೋಧ್ಯೆ,ಮಾ.4- ಉತ್ತರ ಪ್ರದೇಶದ ಅಯೋಧ್ಯೆಅಭಿವೃದ್ಧಿ ಪ್ರಾಧಿಕಾರ ಧನ್ನಿಪುರ ಬಳಿ ಮಸೀದಿ ನಿರ್ಮಾಣಕ್ಕೆ ಅಂತಿಮ ಅನುಮತಿ ನೀಡಿದೆ. ಬಾಬರಿ ಮಸೀದಿ-ರಾಮ ಜನ್ಮಭೂಮಿ ತೀರ್ಪಿನಲ್ಲಿ ಸುಪ್ರೀಂಕೋರ್ಟ್‍ನ ಆದೇಶದಂತೆ ಅಯೋಧ್ಯೆಯಲ್ಲಿ ಉತ್ತರ ಪ್ರದೇಶ ಸರ್ಕಾರವು ನೀಡಿದ ಐದು ಎಕರೆ ಭೂಮಿಯಲ್ಲಿ ಮಸೀದಿ, ಆಸ್ಪತ್ರೆ, ಸಂಶೋಧನಾ ಸಂಸ್ಥೆ, ಸಮುದಾಯ ಅಡುಗೆಮನೆ ಮತ್ತು ಗ್ರಂಥಾಲಯವನ್ನು ನಿರ್ಮಿಸಲಾಗುವುದು ಎಂದು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಟ್ರಸ್ಟ್ ತಿಳಿಸಿದೆ. ಭೂ ಪರಿವರ್ತನೆಗೆ ಎರಡು ವರ್ಷದಿಂದ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದಿಂದ (ಎಡಿಎ) ಅನುಮೋದನೆ ನೀಡದ ಕಾರಣಕ್ಕೆ ನಿರ್ಮಾಣ ಕಾರ್ಯ […]
ನಾಳೆಯಿಂದ ಸರ್ಕಾರಿ ಕಚೇರಿಗಳು ಬಂದ್..?

ಬೆಂಗಳೂರು,ಫೆ.28- ಕೂಡಲೇ ಏಳನೇ ವೇತನ ಆಯೋಗದ ವರದಿಯನ್ನು ಅನುಷ್ಠಾನ ಮಾಡುವುದು ಹಾಗೂ ಹೊಸ ಪಿಂಚಣಿ ವ್ಯವಸ್ಥೆ ರದ್ದುಪಡಿಸಿ ಹಳೆಯ ವ್ಯವಸ್ಥೆಯನ್ನೇ ಮುಂದುವರೆಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸರ್ಕಾರಿ ನೌಕರರು ನಾಳೆಯಿಂದ ಕಚೇರಿಯನ್ನು ಬಂದ್‍ಮಾಡಿ ಅರ್ನಿಷ್ಟಾವ ಮುಷ್ಕರ ನಡೆಸಲಿದ್ದಾರೆ. ಇದರಿಂದಾಗಿ ಸರ್ಕಾರಿ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದ್ದು, ಕಚೇರಿಗೆ ಬರುವ ನೌಕರರನ್ನು ತಡೆ ಹಿಡಿಯುವುದು ಇಲ್ಲವೇ ಬಲವಂತವಾಗಿ ಮುಷ್ಕರದಲ್ಲಿ ಪಾಲ್ಗೊಳ್ಳಬೇಕೆಂದು ಯಾವುದೇ ಸಂಘಟನೆಗಳು ಒತ್ತಡ ಹಾಕಬಾರದೆಂದು ರಾಜ್ಯ ಸರ್ಕಾರ ಎಚ್ಚರಿಕೆ ಕೊಟ್ಟಿದೆ. ಇದರ ನಡುವೆ ಮುಖ್ಯಮಂತ್ರಿ […]