ಶಿವಸೇನಾ ಶಾಸಕರ ಅನರ್ಹತೆ : ಯಾವುದೇ ತೀರ್ಮಾನ ನೀಡದಂತೆ ಸುಪ್ರೀಂ ಸೂಚನೆ

ನವದೆಹಲಿ, ಜು.11- ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣದ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಮುಂದುವರಿಸದಂತೆ ಹೊಸದಾಗಿ ಚುನಾಯಿತರಾಗಿರುವ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‍ಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠವು ಕಪಿಲ್ ಸಿಬಲ್ ನೇತೃತ್ವದ ಹಿರಿಯ ವಕೀಲರು ಉದ್ಧವ್ ಬಣದ ಪರವಾಗಿ ಮಂಡಿಸಿದ ವಾದವನ್ನು ಆಲಿಸಿದರು. ಇಲ್ಲಿ ವಿಷಯ ಇತ್ಯರ್ಥ ವಾಗುವವರೆಗೂ ಅನರ್ಹತೆಯ ಅರ್ಜಿಯ ಮೇಲೆ ಯಾವುದೇ ತೀರ್ಮಾನ ನೀಡದಂತೆ […]