ಎಟಿಎಂನ ಹಣ ಲಪಟಾಯಿಸುತ್ತಿದ್ದ ಕಳ್ಳನ ಬಂಧನ
ತಿರುವನಂತಪುರಂ,ಆ.27- ಎಟಿಎಂ ಯಂತ್ರದ ಹಣ ವಿತರಣೆ ಸ್ಥಳದಲ್ಲಿ ಸಣ್ಣದಾದ ಪ್ಲಾಸ್ಟಿಕ್ ಟೇಪ್ ರೂಪದ ಸ್ಕೇಲ್‍ನ್ನು ಅಳವಡಿಸಿ ಗ್ರಾಹಕರ ಹಣ ಲಪಟಾಯಿಸುತ್ತಿದ್ದ ಉತ್ತಪ್ರದೇಶದ ಮೂಲದ ಖತರ್‍ನಾಕ್ ಕಳ್ಳನೊಬ್ಬನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಎಂ.ಮುಬಾರಕ್ ಬಂಧಿತ ಆರೋಪಿ. ಈತ ಕಳೆದ 6 ದಿನಗಳಲ್ಲಿ ಕೊಚ್ಚಿಯಲ್ಲಿ 11 ಎಟಿಎಂ ಬಳಕೆದಾರರಿಂದ ಹಣವನ್ನು ಕದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಎಟಿಎಂ ಬಳಕೆದಾರರನ್ನು ವಂಚಿಸಿ 1.50 ಲಕ್ಷಕ್ಕೂ ಹೆಚ್ಚು ಹಣಲಪಟಾಯಿಸಿರುವ ಈತ ಎಟಿಎಂನ ಹಣ ವಿತರಣಾ ಸ್ಥಳದಲ್ಲಿ ಸಣ್ಣ ಪ್ಲಾಸ್ಟಿಕ್ ಟೇಪ್-ಕಮ್-ಸ್ಕೇಲ್‍ನ್ನು ಅಳವಡಿಸಿ […]