ಜಾರ್ಖಾಂಡ್ನಲ್ಲಿ ಮತ್ತೆ ಬುಗಿಲೇದ್ದ ಪರಸ್ನಾಥ್ ಬೆಟ್ಟದ ವಿವಾದ

ರಾಂಚಿ,ಜ.7- ಜಾರ್ಖಾಂಡ್ನ ಗಿರಿದಿಃ ಜಿಲ್ಲೆಯ ಪಾಸ್ರ್ನಾಥ ಬೆಟ್ಟವನ್ನು ಬುಡಕಟ್ಟು ಸಮುದಾಯದ ಪವಿತ್ರತಾಣವನ್ನಾಗಿ ಉಳಿಸಬೇಕು ಎಂದು ಒತ್ತಾಯಿಸಿ ಆದಿವಾಸಿ ಸಮುದಾಯಗಳು ಜ.10ರಂದು ಬೃಹತ್ ಪ್ರತಿಭಟನೆಗೆ ಕರೆ ನೀಡಿವೆ. ಈ ಮೂಲಕ ಪಾಸ್ರ್ನಾಥಬೆಟ್ಟದ ವಿವಾದ ಮತ್ತೊಮ್ಮೆ ತಿರುಗು ಮರುಗಾಗಿದ್ದು ಸರ್ಕಾರಗಳು ಇಕ್ಕಟ್ಟಿಗೆ ಸಿಲುಕಿವೆ. ಕೇಂದ್ರ ಸರ್ಕಾರ ಪಾಸ್ರ್ನಾಥಬೆಟ್ಟದಲ್ಲಿ ಪ್ರವಾಸೋದ್ಯಮದ ಎಲ್ಲಾ ಚಟುವಟಿಕೆಗಳಿಗೆ ತಡೆ ನೀಡಿದ ಮಾರನೆಯ ದಿನವೇ ಬುಡಕಟ್ಟು ಸಮುದಾಯದ ಹೊಸ ಬೇಡಿಕೆ ವ್ಯಕ್ತವಾಗಿದೆ. ಜಾರ್ಕಾಂಡ್ ರಾಜ್ಯ ಸರ್ಕಾರ ಪಾಸ್ರ್ನಾಥ ಬೆಟ್ಟವನ್ನು ಪ್ರವಾಸೋದ್ಯಮ ತಾಣವೆಂದು ಘೋಷಿಸಲು 2019ರಲ್ಲಿ ಅಧಿಸೂಚನೆ ಹೊರಡಿಸಿತ್ತು. […]