ಯುದ್ಧ ನಿಲ್ಲಿಸಿ, ಸೇನಾ ಪಡೆಗಳನ್ನು ಹಿಂಪಡೆಯಿರಿ : ವಿಶ್ವಸಂಸ್ಥೆ ಮನವಿ

ವಿಶ್ವಸಂಸ್‍ಥೆ, ಫೆ.24- ನಿಮ್ಮ ಸೇನಾ ಪಡೆಗಳನ್ನು ಹಿಂಪಡೆಯಿರಿ ಮತ್ತು ಯುದ್ಧವನ್ನು ನಿಲ್ಲಿಸಿ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರಸ್ ಮನವಿ ಮಾಡಿದ್ದಾರೆ. ಯುದ್ಧ ಘೋಷಣೆಗೂ ಮುನ್ನಾ ಮಾತನಾಡಿರುವ ಅವರು, ರಷ್ಯಾ ಅಧ್ಯಕ್ಷರು ಕೂಡಲೇ ಮಾನವೀಯತೆ ಹೆಸರಿನಲ್ಲಿ ಯುದ್ಧವನ್ನು ನಿಲ್ಲಿಸಬೇಕು. ರಕ್ಷಣಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು. ಯುದ್ಧದಿಂದ ಉಕ್ರೇನ್ ಮೇಲೆ ಪರಿಣಾಮ ಬೀರಲಿದೆ ಮತ್ತು ಜಾಗತಿಕ ಆರ್ಥಿಕತೆ ಕುಸಿಯಲಿದೆ ಎಂದು ಎಚ್ಚರಿಸಿದ್ದಾರೆ.  ಯುದ್ಧದ ಪರಿಸ್ಥಿತಿಯನ್ನು ಅವಲೋಕಿಸಲು ಅವರು ಭದ್ರತಾ ಮಂಡಳಿಯ ತುರ್ತು ಸಭೆ ಕರೆದಿದ್ದಾರೆ.