ವಿಶ್ವದ 28 ದೇಶಗಳಲ್ಲಿ ಕ್ರಾಕೆನ್ ವೈರಸ್ ಅಬ್ಬರ

ನವದೆಹಲಿ,ಜ.7- ಚೀನಾ ಬಳಿಕ ಅಮೆರಿಕಾವನ್ನು ಕಾಡುತ್ತಿರುವ ಕೋವಿಡ್‍ನ ರೂಪಾಂತರ ಕ್ರಾಕೆನ್ ಉಪತಳಿ ಕ್ರಮೇಣ ಜಗತ್ತಿನ 28 ದೇಶಗಳಲ್ಲಿ ವ್ಯಾಪಿಸಲಾರಂಭಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕೋವಿಡ್-19 ಹಾಗೂ ಅದರ ರೂಪಾಂತರಿಗಳಲ್ಲಿ ಕ್ರಾಕೆನ್ ಹೆಚ್ಚು ವೇಗವಾಗಿ ಹರಡುವ ಸೋಂಕಾಗಿದೆ. ಇದರಿಂದ ಅಮೆರಿಕಾದಲ್ಲಿ ಆಸ್ಪತ್ರೆ ದಾಖಲಾಗುವ ಪ್ರಮಾಣ ಶೇ.16.1ರಷ್ಟು ಹೆಚ್ಚಾಗಿದೆ. ಡಿಸೆಂಬರ್ ಅರಂಭದಲ್ಲಿ ಅಮೆರಿಕಾದಲ್ಲಿ ಕಾಣಿಸಿಕೊಂಡ ಸೋಂಕು ಮೂರು ವಾರಗಳಲ್ಲಿ ಶೇ.41ರಷ್ಟು ಮಂದಿಯಲ್ಲಿ ಪಾಸಿಟಿವ್ ಆಗಿದೆ. ಈ ವಾರ ಅಮೆರಿಕಾದ ಸೋಂಕಿನಲ್ಲಿ ಕ್ರಾಕೆನ್ ಪಾಲು ಶೇ.75ರಷ್ಟಾಗಿಲಿದೆ ಎಂದು ಕೇಂದ್ರ ರೋಗ […]