ಧರ್ಮ ದಂಗಲ್: ಪೊಲೀಸ್ ಭದ್ರತೆಯಲ್ಲಿ ಸುಬ್ರಮಣ್ಯಸ್ವಾಮಿ ರಥೋತ್ಸವ

ಬೆಂಗಳೂರು,ನ.29- ಧರ್ಮ ದಂಗಲ್ ಕಾರಣದಿಂದಾಗಿ ಇಂದು ನಡೆಯುತ್ತಿರುವ ವಿವಿ ಪುರಂ ಸುಬ್ರಮಣ್ಯ ಸ್ವಾಮಿ ರಥೋತ್ಸವಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಹಿಂದೂಗಳ ಧಾರ್ಮಿಕ ಆಚರಣೆ ಸಂದರ್ಭದಲ್ಲಿ ಅನ್ಯ ಧರ್ಮಿಯ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದು ಎಂದು ಹಿಂದೂ ಪರ ಸಂಘಟನೆಗಳು ಆಗ್ರಹಿಸಿದ್ದ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‍ನಲ್ಲಿ ರಥೋತ್ಸವ ನೆರವೇರಿಸಲಾಯಿತು. ಇಂದಿನ ರಥೋತ್ಸವದ ಹಿನ್ನಲೆಯಲ್ಲಿ ಅನ್ಯ ಧರ್ಮಿಯರ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿಕೊಂಡಿದ್ದ ಹಿಂದೂ ಪರ ಹೋರಾಟಗಾರರನ್ನು ತಡರಾತ್ರಿ ಪೊಲೀಸರು ಬಂಧಿಸಿ, […]

ರಾಜಧಾನಿಗೆ ಕಾಲಿಟ್ಟ ‘ಧರ್ಮ’ ದಂಗಲ್

ಬೆಂಗಳೂರು, ನ.26- ಕುಕ್ಕೆ ಸುಬ್ರಮಣ್ಯ ದೇವಾಲಯದ ಧಾರ್ಮಿಕ ಕಾರ್ಯಕ್ರಮದಲ್ಲಿ ಅನ್ಯ ಭಾಷಿಕ ವ್ಯಾಪಾರಿಗಳು ವ್ಯಾಪಾರ ಮಾಡಲು ಅವಕಾಶ ನೀಡಬಾರದು ಎಂಬ ಕೂಗು ಇದೀಗ ರಾಜಧಾನಿಗೂ ಕಾಲಿಟ್ಟಿದೆ. ಕೆಲವೆ ದಿನಗಳಲ್ಲಿನಡೆಯಲಿರುವ ವಿವಿಪುರಂ ಸುಬ್ರಮಣ್ಯ ಸ್ವಾಮಿ ರಥೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿಅನ್ಯ ಧರ್ಮಿಯ ವ್ಯಾಪಾರಿಗಳು ವ್ಯಾಪಾರ ಮಾಡಲು ಅವಕಾಶ ನೀಡಬಾರದು ಎಂದು ಹಿಂದೂ ಪರ ಸಂಘಟನೆಗಳು ಒತ್ತಾಯಿಸಿವೆ. ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲಿ ನಡೆಯಲಿರುವ ಷಷ್ಠಿ ಕಾರ್ಯಕ್ರಮಗಳ ಸಂದರ್ಭದಲ್ಲಿ ಅನ್ಯಭಾಷಿಕ ವ್ಯಾಪಾರಿಗಳಿಗೆ ಅವಕಾಶ ಕೊಡಬಾರದು ಎಂದು ಆ ಭಾಗದ ಹಿಂದೂ ಮುಖಂಡರುಗಳು ಒತ್ತಾಯಿಸುತ್ತಲೆ […]