ಅಮೆರಿಕ ಮತ್ತು ಚೀನಾಗೆ ಓಮಿಕ್ರಾನ್‍ನ ಉಪತಳಿಗಳ ಕಾಟ

ನವದೆಹಲಿ,ನ.6-ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕೋವಿಡ್ ಹಾವಳಿ ತಗ್ಗಿದೆಯಾದರೂ ಅಮೆರಿಕ ಮತ್ತು ಚೀನಾವನ್ನು ಕೊರೊನಾದ ಉಪತಳಿಗಳು ಕಾಡಲಾರಂಭಿಸಿವೆ. ಓಮಿಕ್ರಾನ್‍ನ ಉಪತಳಿಗಳಾದ ಬಿಕ್ಯೂ1 ಮತ್ತು ಬಿಕ್ಯೂ1.1 ರೂಪಾಂತರಿಗಳು ಚೀನಾ ಮತ್ತು ಅಮೆರಿಕಕ್ಕೆ ಕಂಟಕಪ್ರಾಯವಾಗಿದ್ದು, ಒಟ್ಟು ಕೋವಿಡ್ ಸೋಂಕಿನಲ್ಲಿ ಶೇ.35ರಷ್ಟು ಪಾಲು ಪಡೆದಿವೆ. ಭಾರತದಲ್ಲಿ ಕೋವಿಡ್ ಸೋಂಕು ತಗ್ಗಿದ್ದು, ಭಾನುವಾರ 1132 ಹೊಸ ಪ್ರಕರಣಗಳು ವರದಿಯಾಗಿವೆ. 14 ಸಾವುಗಳು ಸಂಭವಿಸಿವೆ. ಅದೃಷ್ಟವಶಾತ್ ಸಕ್ರಿಯ ಪ್ರಕರಣಗಳ ಸಂಖ್ಯೆ 15 ಸಾವಿರದ ಒಳಗೆ ತಗ್ಗಿದೆ. ಚೀನಾ ಶೂನ್ಯ ಕೋವಿಡ್ ನೀತಿಯನ್ನು ಕಡ್ಡಾಯವಾಗಿ ಜಾರಿಗೊಳಿಸುತ್ತಿದೆ. ಲಾಕ್‍ಡೌನ್, […]