ಪ್ರಜಾಪ್ರಭುತ್ವ ಪರ ಪ್ರತಿಭಟನೆ ತಾರಕಕ್ಕೆ: ಸೂಡಾನ್ ಪ್ರಧಾನಿ ರಾಜೀನಾಮೆ

ಕೈರೋ,ಜ.3- ಸೂಡಾನ್ ಪ್ರಧಾನ ಮಂತ್ರಿ ಅಬ್ದುಲ್ಲಾ ಹಮ್ಡೋಕ್ ಅವರು ರಾಜಕೀಯ ಅಸ್ತವ್ಯಸ್ತತೆ ಮತ್ತು ವ್ಯಾಪಕವಾದ ಪ್ರಜಾಪ್ರಭುತ್ವ ಪರ ಪ್ರತಿಭಟನೆಗಳ ನಡುವೆ ಕಳೆದ ರಾತ್ರಿ ರಾಜೀನಾಮೆ ಘೋಷಿಸಿದ್ದಾರೆ. ಅಕ್ಟೋಬರ್‍ನಲ್ಲಿ ಮಿಲಿಟರಿ ಧಂಗೆಯ ನಂತರ ಒಪ್ಪಂದದ ಭಾಗವಾಗಿ ಹಮ್ಡೋಕ್ ನವೆಂಬರ್‍ನಲ್ಲಿ ಪ್ರಧಾನ ಮಂತ್ರಿಯಾಗಿದ್ದರು. ಈಗ ಅವರ ರಾಜೀನಾಮೆಯು ದೇಶದ ಭದ್ರತೆ ಮತ್ತು ಆರ್ಥಿಕ ಸವಾಲಿನ ಜೊತೆಗೆ ರಾಜಕೀಯ ಅನಿಶ್ಚಿತತೆಗೆ ಕಾರಣವಾಗಿದೆ. ಪ್ರಜಾಪ್ರಭುತ್ವಕ್ಕೆ ಸೂಡಾನ್ ಪರಿವರ್ತನೆಯನ್ನು ಪೂರ್ಣಗೊಳಿಸಲು ಮಾರ್ಗ ನಕ್ಷೆ ನಮ್ಮ ಮುಂದಿದೆ ಎಂದು ಹೇಳಿದ್ದಾರೆ. ಇನ್ನೊಬ್ಬ ವ್ಯಕ್ತಿಗೆ ರಾಷ್ಟ್ರವನ್ನು ಮುನ್ನಡೆಸಲು […]