ಜಾಕ್ವೆಲಿನ್‍ಳನ್ನು ನನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತೇನೆ : ಸುಕೇಶ್

ನವದೆಹಲಿ,ಮಾ.7- ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್‍ಗಾಗಿ ನಾನು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತೇನೆ ಹಾಗೂ ಆ ಹೆಣ್ಣು ಮಗುವನ್ನು ನಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇನೆ ಎಂದು ಪ್ರಭಾವಿ ಉದ್ಯಮಿಗಳಿಂದ ನೂರಾರು ಕೋಟಿ ರೂ. ವಸೂಲಿ ಮಾಡಿದ ಆರೋಪದ ಮೇಲೆ ಜೈಲು ಪಾಲಾಗಿರುವ ವಂಚಕ ಸುಕೇಶ್ ಚಂದ್ರಶೇಖರ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಸುಕೇಶ್‍ಗೆ ಸಂಬಂಧಿಸಿದ ಬಹುಕೋಟಿ ಸುಲಿಗೆ ಪ್ರಕರಣದಲ್ಲಿ ಪೊಲೀಸರಿಂದ ವಿಚಾರಣೆಗೆ ಒಳಪಟ್ಟಿರುವ ಫರ್ನಾಂಡಿಸ್ ಅವರಿಗೆ ಲವ್ ನೋಟ್ ಮೂಲಕ ಹೋಳಿ ಶುಭಾಷಯ ತಿಳಿಸಿಸಿರುವ ಸುಕೇಶ್ ನನ್ನ ಕೈ ಬರಹದ […]