ಸಿಬಿಐಯಿಂದ ಸಿಸೋಡಿಯಾ ತೀವ್ರ ವಿಚಾರಣೆ

ನವದೆಹಲಿ,ಅ.17- ದೆಹಲಿಯ ಅಮ್ ಆದ್ಮಿ ಸರ್ಕಾರದ ಉಪಮುಖ್ಯ ಮಂತ್ರಿ ಮನೀಶ್ ಸಿಸೋಡಿಯ ಅವರನ್ನು ಸಿಬಿಐ ಇಂದು ತೀವ್ರ ವಿಚಾರಣೆಗೊಳಪಡಿಸಿದೆ. ದೆಹಲಿ ಸರ್ಕಾರದ ಅಬಕಾರಿ ನೀತಿ ಜಾರಿಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್ ಗೌರ್ನರ್ ವಿನಯ್‍ಕುಮಾರ್ ಸಕ್ಸೇನ ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಿದ್ದರು. ಅದರ ಅನುಸಾರ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್‍ಗಳಡಿ ಸಿಬಿಐ ಪ್ರಕರಣ ದಾಖಲಿಸಿ ಹಲವಾರು ಭಾಗಗಳಲ್ಲಿ ಶೋಧ ಕಾರ್ಯಚರಣೆ ನಡೆಸಿತ್ತು. ಈ ವೇಳೆ ದೊರೆತ ದಾಖಲಾತಿಗಳು ಹಾಗೂ ವಿವಿಧ […]