100 ರೂ. ಕಡಿಮೆ ನೀಡಿದ್ದನ್ನು ಪ್ರಶ್ನಿಸಿದ ಸಪ್ಲೈಯರ್ ಕೊಲೆ

ಮೈಸೂರು, ಜು.21- ಬಾರೊಂದರಲ್ಲಿ ನೂರು ರೂ. ಕಡಿಮೆ ನೀಡಿದ್ದನ್ನು ಪ್ರಶ್ನಿಸಿದ ಕಾರಣಕ್ಕೆ ಸಪ್ಲೈಯರ್‍ನನ್ನು ಚಾಕುವಿನಿಂದ ಇರಿದು ಕೊಲೆಗೈದ ಘಟನೆ ನಗರದ ವಿದ್ಯಾರಣ್ಯಪುರಂನಲ್ಲಿ ತಡರಾತ್ರಿ ನಡೆದಿದೆ. ಮಂಡ್ಯ ಮೂಲದ ನಂದನ್ ಕುಮಾರ್ ಅಲಿಯಾಸ್ ಅಪ್ಪಿ ಕೊಲೆಯಾದ ವ್ಯಕ್ತಿ. ವಿದ್ಯಾರಣ್ಯಪುರಂನ ಮಾನಂದವಾಡಿ ರಸ್ತೆಯಲ್ಲಿರುವ ನವರಂಗ್ ಬಾರ್‍ಗೆ ಮಹದೇವಪುರ ಹುಡುಗರ ತಂಡವೊಂದು ಬಂದಿದ್ದು, ಮದ್ಯ ಸೇವಿಸಿದ್ದಾರೆ. ಮದ್ಯ ಸೇವಿಸಿ ಬಿಲ್‍ನಲ್ಲಿ ನಮೂದಾಗಿದ್ದ ಹಣಕ್ಕಿಂತ ನೂರು ರೂ. ಕಡಿಮೆ ನೀಡಿದ್ದರು ಎನ್ನಲಾಗಿದೆ. ಅದನ್ನು ಸಪ್ಲೈಯರ್ ನಂದನ್ ಕುಮಾರ್ ಪ್ರಶ್ನಿಸಿದ್ದು, ಅದರಿಂದ ಕೋಪಗೊಂಡ ಹುಡುಗರು […]