ಪ್ರಧಾನಿ ಭದ್ರತಾ ಲೋಪ : ಸುಪ್ರೀಂನಲ್ಲಿ ನಾಳೆ ವಿಚಾರಣೆ

ನವದೆಹಲಿ, ಜ.6- ಪಂಜಾಬ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಲೋಪದ ಕುರಿತು ಕೂಲಂಕಶ ತನಿಖೆಗೆ ಆದೇಶಿಸಬೇಕು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಖಚಿತಪಡಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಮನವಿಯ ವಿಚಾರಣೆಯನ್ನು ಸುಪ್ರೀಮಕೋರ್ಟ್ ನಾಳೆ ನಡೆಸಲಿದೆ. ಪಂಜಾಬ್‍ನ ಫಿರೋಜ್‍ಪುರದಲ್ಲಿ ಪ್ರಧಾನಿಯವರ ಭದ್ರತೆ ವಿಷಯದಲ್ಲಿ ಗಂಭೀರ ಲೋಪವಾಗಿದೆ ಎಂದು ಹಿರಿಯ ನ್ಯಾಯವಾದಿ ಮಣಿಂದರ್‍ಸಿಂಗ್ ಅವರು ನೀಡಿರುವ ಹೇಳಿಕೆಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರ ನೇತೃತ್ವದ ನ್ಯಾಯಪೀಠ ವಿಚಾರಣೆಗೆ ಪರಿಗಣಿಸಿತು. ಅರ್ಜಿಯ ಪ್ರತಿಯನ್ನು ರಾಜ್ಯ ಸರ್ಕಾರಕ್ಕೆ ನೀಡಿ […]