ವಂಚನೆ ಮಾಡಿದವನನ್ನು ಕೊಂದು ಶವದ ಜೊತೆ ಪೊಲೀಸರಿಗೆ ಶರಣಾದ

ಬೆಂಗಳೂರು, ನ.22- ಲೋನ್ ಕೊಡಿಸುವುದಾಗಿ ಹೇಳಿ ಹಣವನ್ನು ಪಡೆದು ವಂಚಿಸಿದ್ದ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪಿ ಕಾರಿನಲ್ಲಿ ಶವ ಇಟ್ಟುಕೊಂಡು ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ನಂಜನಗೂಡು ಮೂಲದ ಮಹೇಶಪ್ಪ(45) ಕೊಲೆಯಾದ ವ್ಯಕ್ತಿ. ಆರೋಪಿ ರಾಮಮೂರ್ತಿ ನಗರ ಜಯಂತಿ ನಗರದ ನಿವಾಸಿ ರಾಜಶೇಖರ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ರಾಜಶೇಖರ ವೃತ್ತಿಯಲ್ಲಿ ಕಾರು ಮೆಕಾನಿಕ್. ಮಹೇಶಪ್ಪ ಸಂಘ-ಸಂಸ್ಥೆಗಳಿಂದ ಲೋನ್ ಕೊಡಿಸುವುದಾಗಿ ಹೇಳಿ ರಾಜಶೇಖರ ಹಾಗೂ ಆತನ ತಾಯಿಯಿಂದ ಹಣ ಪಡೆದುಕೊಂಡು […]