ಜಾರ್ಖಂಡ್ : ಮಾವೋವಾದಿಗಳಿಂದ ರೈಲು ಹಳಿ ಸ್ಫೋಟ

ಗಿರಿಧ್, ಜ.27- ಜಾರ್ಖಂಡ್‍ನ ಗಿರಿಧ್ ಜಿಲ್ಲೆಯಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ) ಶಂಕಿತ ಸದಸ್ಯರು ರೈಲ್ವೆ ಹಳಿಯ ಒಂದು ಭಾಗವನ್ನು ಇಂದು ಮುಂಜಾನೆ ಸೋಟಿಸಿದ್ದಾರೆ ಎಂದು ಓರ್ವ ಅಧಿಕಾರಿ ತಿಳಿಸಿದ್ದಾರೆ. ಸ್ಫೋಟದ ನಂತರ ಹೌರಾ-ನವದೆಹಲಿ ಮಾರ್ಗದ ರೈಲು ಸೇವೆಗಳಿಗೆ ಸುಮಾರು ಆರು ಗಂಟೆಗಳ ಕಾಲ ಅಡಚಣೆ ಉಂಟಾಯಿತು ಎಂದು ಆರ್‍ಪಿಎಫ್ ಸೀನಿಯರ್ ಕಮಾಂಡೆಂಟ್ ಹೇಮಂತ್‍ಕುಮಾರ್ ಹೇಳಿದರು. ಈ ಎರಡು ನಿಲ್ದಾಣಗಳ ನಡುವೆ ರೈಲು ಸಂಚಾರವನ್ನು ಮಧ್ಯರಾತ್ರಿ 12.30ಕ್ಕೆ ಸ್ಥಗಿತಗೊಳಿಸಲಾಯಿತು ಮತ್ತು ಸುಮಾರು 6.30ರ ಹೊತ್ತಿಗೆ ಪುನರಾರಂಭಿಸಲಾಯಿತು ಎಂದು ಅವರು […]