ಬಿಹಾರದಲ್ಲಿ ನಕಲಿ ಮದ್ಯ ಸೇವಿಸಿ ಆರು ಮಂದಿ ಸಾವು

ಬಿಹಾರ, ಆ.13- ನಕಲಿ ಮದ್ಯಸೇವನೆಯಿಂದ ಆರು ಮಂದಿ ಸಾವನ್ನಪ್ಪಿ ಹಲವರು ಅಸ್ವಸ್ಥಗೊಂಡಿರುವ ಘಟನೆ ಬಿಹಾರದ ಸರನ್ ಜಿಲ್ಲೆಯ ಭೂಲ್ಪುರ್ ಗ್ರಾಮದಲ್ಲಿ ನಡೆದಿದೆ.ಮೃತರನ್ನು ಭೂಲ್ಪುರ್ ನಿವಾಸಿಗಳಾದ ಕಾಮೇಶ್ವರ್ ಮಹತೋ, ರಾಮ್ಜೀವನ್, ರೋಹಿತ್ ಸಿಂಗ್, ಕಾಪುಸಿಂಗ್, ಗರ್ಕಾವೋದಾ ಗ್ರಾಮದ ಮಹಮ್ಮದ್ ಅಲ್ಲಾವುದ್ದೀನ್ ಖಾನ್ ಎಂದು ಗುರುತಿಸಲಾಗಿದೆ. ನಕಲಿ ಮದ್ಯಸೇವನೆಯಿಂದ ಇನ್ನೂ ಹಲವರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಮಚ್ಚನಪುರ ಗ್ರಾಮದ ಮಹಿಳೆಯಿಂದ ಮದ್ಯ ಖರೀದಿಸಿ ಸೇವನೆ ಮಾಡಿದ ಬಳಿಕ ವಾಂತಿ-ಭೇದಿ ಶುರುವಾಗಿತ್ತು ಎಂದು […]