ಚಳಿಗಾಲದ ಅಧಿವೇಶನಕ್ಕೆ ಮಾತ್ರ ಸೀಮಿತವಾದ ಸುವರ್ಣಸೌಧ, ಕಾಗದದಲ್ಲೇ ಉಳಿದ ಕಚೇರಿಗಳ ಸ್ಥಳಾಂತರ ಆದೇಶ

ಬೆಂಗಳೂರು, ಡಿ.17- ಬೆಳಗಾವಿ ಸುವರ್ಣಸೌಧ ಸೇರಿ ಉತ್ತರ ಕರ್ನಾಟಕ ಭಾಗಕ್ಕೆ ಕೆಲ ಪ್ರಮುಖ ರಾಜ್ಯಮಟ್ಟದ ಸರ್ಕಾರಿ ಕಚೇರಿಗಳ ಸ್ಥಳಾಂತರಿಸುವ ಆದೇಶ ಇನ್ನೂ ಕಾಗದದಲ್ಲಿಯೇ ಉಳಿದಿದೆ. ಉತ್ತರ ಕರ್ನಾಟಕದ ಮೂಲದ ಸಿಎಂ ಬೊಮ್ಮಾಯಿಯೇ ಬೆಳಗಾವಿ ಸುವರ್ಣಸೌಧವನ್ನು ಕ್ರಿಯಾಶೀಲವನ್ನಾಗಿ ಮಾಡುತ್ತೇನೆಂದು ಪದೇ ಪದೆ ಹೇಳಿದ್ದರೂಅದು ಬರೀ ಮುಖಸ್ತುತಿಯಾಗಿ ಉಳಿದಿದೆ. ಬೆಳಗಾವಿಯ ಸುವರ್ಣವಿಧಾನಸೌಧಕ್ಕೆ ಬೆಂಗಳೂರಿನಿಂದ ಕೆಲ ಪ್ರಮುಖ ಸರ್ಕಾರಿ ಕಚೇರಿಗಳನ್ನೂ ಸ್ಥಳಾಂತರಿಸಬೇಕು ಎಂಬುದು ಬಹು ವರ್ಷಗಳಿಂದ ಇರುವ ಬೇಡಿಕೆ. ಆದರೆ ಈ ಕೂಗು ಅರಣ್ಯರೋದನ ಆಗಿದೆಯೇ ಹೊರತು ಅನುಷ್ಠಾನ ಮಾತ್ರ ವಿಳಂಬಗೊಂಡಿದೆ. […]