ಚೀನಾ ಗಡಿಯಲ್ಲಿ ಯುದ್ಧ ಟ್ಯಾಂಕರ್ ಗಳನ್ನು ನಿಯೋಜಿಸಿದ ಭಾರತ

ನವದೆಹಲಿ,ಆ.27- ಚೀನಾ-ಭಾರತ ಗಡಿಭಾಗದಲ್ಲಿ ಭವಿಷ್ಯದ ಸವಾಲುಗಳನ್ನು ಎದುರಿಸಲು ಭಾರತ ಹಗುರವಾದ ಟ್ಯಾಂಕರ್‍ಗಳು, ಶಸ್ತ್ರಸಜ್ಜಿತ ಡ್ರೋಣ್‍ಗಳ ಸಮೂಹವನ್ನು ನಿಯೋಜಿಸಿದೆ. ಚೀನಾದಿಂದ ಭವಿಷ್ಯದಲ್ಲಿ ಬಲವಂತವಾಗಿ ಎದುರಾಗಬಹುದಾದ ಪರಿಸ್ಥಿತಿಯನ್ನು ನಿಭಾಯಿಸಲು ಭಾರತ, ಪ್ರಾಜೆಕ್ಟ್ ಜೋರ್‍ವಾರ್ ಶುರು ಮಾಡಿದೆ. ಸುಮಾರು 350ಕ್ಕೂ ಹೆಚ್ಚಿನ ದೇಶಿ ನಿರ್ಮಿತ ಹಗುರವಾದ ಟ್ಯಾಂಕರ್‍ಗಳನ್ನು ಗಡಿಭಾಗದಲ್ಲಿ ಸಜ್ಜುಗೊಳಿಸಲಾಗಿದೆ. ಇವು ಅತಿವೇಗವಾಗಿ ಚಲಿಸುವುದಲ್ಲದೆ ಸುಲಭವಾಗಿ ಮತ್ತು ಸಂಚಲನಾತ್ಮಕವಾಗಿ ಪರ್ವತಶ್ರೇಣಿಗಳಲ್ಲಿ ಕಾರ್ಯ ನಿರ್ವಹಿಸಬಲ್ಲವಾಗಿವೆ. ವಾಯುಮಾರ್ಗದಲ್ಲಿ ನಿಗಾವಹಿಸಲು ನವೋದ್ಯಮ ಸಂಸ್ಥೆಯೊಂದರ ಮೂಲಕ ಸಜ್ಜುಗೊಳಿಸಲಾದ ಶಸ್ತ್ರ ಸಜ್ಜಿತ ಡ್ರೋಣ್‍ಗಳನ್ನು ನಿಯೋಜಿಸಲಾಗಿದೆ. ಸ್ವಾಯತ್ತ ನಿಗಾವಣೆ ಮತ್ತು […]