ಭಾರತ-ಪಾಕ್ ಗಡಿಭಾಗದಲ್ಲಿ ಯೋಧರ ಸಿಹಿ-ಶುಭಾಷಯ ವಿನಿಮಯ

ನವದೆಹಲಿ,ಆ.14-75ನೇ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಭಾರತ ಮತ್ತು ಪಾಕಿಸ್ತಾನದ ಗಡಿಭಾಗದಲ್ಲಿ ಎರಡು ದೇಶಗಳ ಯೋಧರು ಪರಸ್ಪರ ಸಿಹಿ ಹಂಚುವ ಮೂಲಕ ಶುಭಾಷಯ ವಿನಿಮಯ ಮಾಡಿಕೊಂಡಿದ್ದಾರೆ.ಪ್ರತಿ ವರ್ಷದಂತೆ ಈ ಬಾರಿಯೂ ಭಾರತದ ಗಡಿಭದ್ರತಾ ಪಡೆ(ಬಿಎಸ್‍ಎಫ್ ) , ಪಾಕಿಸ್ತಾನದ ರೇಂಜರ್ಸ್ ಪಡೆಗಳ ಶಿಸ್ತುಬದ್ದ ಸಮವಸ್ತ್ರದಲ್ಲಿ ಗಡಿಯ ಬಾಗಿಲನ್ನು ತೆರೆದು ಪರಸ್ಪರ ಭೇಟಿಯಾಗಿ ಸಿಹಿ ಹಂಚಿಕೊಂಡಿದ್ದಾರೆ. ನಾಳೆ ಸ್ವಾತಂತ್ರ್ಯ ಸಂಭ್ರಮದ ವೇಳೆ ಎರಡೂ ದೇಶಗಳ ರಕ್ಷಣಾ ಪಡೆಗಳು ಕವಾಯತಿನ ಮೂಲಕ ಗಮನಸೆಳೆಯಲಿವೆ. ಸಾಂಪ್ರದಾಯಿಕವಾದ ಸಂಘರ್ಷದ ನಡುವೆಯೂ ಕೂಡ ಗಡಿಯಲ್ಲಿ ಸೌಹಾರ್ದತೆ […]