ಕೊಡಗಿನಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆ

ಬೆಂಗಳೂರು,ನ.8- ಕೊರೊನಾ, ಓಮಿಕ್ರಾನ್ ಸೋಂಕಿನಿಂದ ತತ್ತರಿಸಿದ್ದ ರಾಜ್ಯದ ಆರೋಗ್ಯ ಇಲಾಖೆಗೆ ಈಗ ಆಫ್ರಿಕನ್ ಹಂದಿ ಜ್ವರದ ಆತಂಕ ಎದುರಾಗಿದೆ. ಕೊಡಗಿನಲ್ಲಿ ಹಂದಿಗಳಿಗೆ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡು ಜನರು ಆತಂಕದಲ್ಲಿದ್ದಾರೆ. ಮೊದಲೇ ಕೊರೊನಾದಿಂದ ಎರಡು ವರ್ಷ ತತ್ತರಿಸಿದ್ದ ರಾಜ್ಯದ ಜನತೆಗೆ ಇದೀಗ ಆಫ್ರಿಕನ್ ಹಂದಿ ಜ್ವರ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಜ್ವರ ಮನುಷ್ಯನಿಗೆ ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ. ಸಾಮಾನ್ಯ ಹಂದಿ ಜ್ವರಕ್ಕಿಂತಲೂ ಇದರ ತೀವ್ರತೆ ಹೆಚ್ಚಾಗಿದ್ದು, ಹಂದಿಯಿಂದ ಮನುಷ್ಯರಿಗೂ ಬರುವ ಸಾಧ್ಯತೆ ಇದ್ದು, ಆರೋಗ್ಯ […]

ಮಧ್ಯ ಪ್ರದೇಶದಲ್ಲಿ ಹಂದಿಜ್ವರಕ್ಕೆ 85 ಹಂದಿಗಳು ಸಾವು

ಕತ್ನಿ, ನ.8- ಮಧ್ಯ ಪ್ರದೇಶದ ಕತ್ನಿ ಜಿಲ್ಲೆಯಲ್ಲಿ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿದ್ದು, 85 ಹಂದಿಗಳು ಸಾವನ್ನಪ್ಪಿವೆ. ಇತ್ತೀಚೆಗೆ ದೇಶದಲ್ಲಿ ಹಲವು ಭಾಗಗಳಲ್ಲಿ ಈ ಸಾಂಕ್ರಾಮಿಕ ಕಾಣಿಸಿಕೊಂಡು ಆತಂಕ ಮೂಡಿಸಿದೆ. ಕರ್ನಾಟಕದ ಮಂಗಳೂರಿನಲ್ಲಿ ಹಂದಿಜ್ವರ ಕಾಣಿಸಿಕೊಂಡು ಹಲವು ಹಂದಿಗಳನ್ನು ಕೊಳ್ಳಲಾಗಿದೆ. ಬೆಂಗಳೂರಿನಲ್ಲೂ ಕೂಡ ಈ ಸೋಂಕು ಕಾಣಿಸಿಕೊಂಡಿದೆ. ಈಗ ಮಧ್ಯ ಪ್ರದೇಶದಲ್ಲೂ ಸೋಂಕು ಕಾಣಿಸಿಕೊಂಡಿದೆ, ಪಶು ಸಂಗೋಪನಾ ಇಲಾಖೆಯ ನಾಲ್ಕು ತಂಡಗಳು ಜಿಲ್ಲೆಯಲ್ಲಿ ತಪಾಸಣೆ ನಡೆಸಿದ್ದು, ಬಾಧಿತ 115 ಹಂದಿಗಳನ್ನು ಗುರುತಿಸಿದ್ದಾರೆ. ಜ್ವರ ತಗುಲಿದ ಹಂದಿಗಳನ್ನು ಕೊಲ್ಲಲಾಗುತ್ತಿದೆ. […]

ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ

ತಿರುವನಂತಪುರಂ, ಜು.22- ಕೇರಳದ ವಯನಾಡ್ ಜಿಲ್ಲೆಯ ಮನಂತವಾಡಿಯಲ್ಲಿನ ಎರಡು ಹಂದಿ ಫಾರಂಗಳಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿದ್ದು, ರಾಜ್ಯ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಫಾರ್ಮ್ ಒಂದರಲ್ಲಿ ಹಂದಿಗಳು ಸಾಮೂಹಿಕವಾಗಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಭೋಪಾಲ್‍ನಲ್ಲಿರುವ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್‍ನ ಪರೀಕ್ಷೆಯಲ್ಲಿ ಎರಡು ಫಾರ್ಮ್‍ಗಳಲ್ಲಿ ಸೋಂಕು ಪತ್ತೆಯಾಗಿದೆ ಎಂದು ಪಶುಸಂಗೋಪನಾ ಇಲಾಖೆ ಅಕಾರಿ ತಿಳಿಸಿದ್ದಾರೆ. ಅಪಾಯಕಾರಿ ಹಂದಿ ಜ್ವರ ಪತ್ತೆಯಾದ ಹಿನ್ನೆಲೆಯಲ್ಲಿ ಫಾರ್ಮ್‍ನಲ್ಲಿದ್ದ 300 ಹಂದಿಗಳನ್ನು ಕೊಲ್ಲಲು ಆದೇಶಿಸಲಾಗಿದೆ. […]

ಅಸ್ಸಾಂನಲ್ಲಿ ಆಫ್ರಿಕನ್ ಸ್ವೈನ್ ವೈರಸ್ ಪತ್ತೆ, 40,159 ಹಂದಿಗಳ ಸಾವು..!

ಅಸ್ಸಾಂ,ಜು.17- ಇಲ್ಲಿನ ದಿಬ್ರುಗಢ್‍ನ ಭೋಗಾಲಿ ಪಥರ್ ಗ್ರಾಮದಲ್ಲಿ ಹಂದಿಯೊಂದಕ್ಕೆ ನಡೆಸಿದ ಪರೀಕ್ಷೆಯಲ್ಲಿ ಆಫ್ರಿಕನ್ ಸ್ವೈನ್ ವೈರಸ್ ಪತ್ತೆಯಾಗಿದೆ. ಈ ಕುರಿತು ಮಾಹಿತಿ ನೀಡಿರುವ ದಿಬ್ರುಗಢ್ ಪಶುಸಂಗೋಪನೆ ಮತ್ತು ಪಶುವೈದ್ಯಾಧಿಕಾರಿ ಡಾ.ಹಿಮಂದು ಬಿಕಾಶ್ ಬರುವಾ, ಹಂದಿಯೊಂದಕ್ಕೆ ಆಫ್ರಿಕನ್ ಹಂದಿ ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆ ಪ್ರದೇಶದ ವ್ಯಾಪ್ತಿಯಲ್ಲಿರುವ ಎಲ್ಲಾ ಹಂದಿಗಳನ್ನು ಕೊಲ್ಲಲಾಗಿದೆ ಎಂದು ತಿಳಿಸಿದ್ದಾರೆ. ನಾವು ಮೊದಲು 1 ಕಿಮೀ ವರೆಗಿನ ಪ್ರದೇಶವನ್ನು ಸೋಂಕಿತ ಎಂದು ಘೋಷಿಸಿದ್ದು, ಸೋಂಕಿತ ಪ್ರದೇಶದಲ್ಲಿ ಎಲ್ಲಾ ಹಂದಿಗಳನ್ನು ಕೊಂದು ಹೂಳಿದ್ದೇವೆ. ಅದೇ ಸಮಯದಲ್ಲಿ, […]