ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಳ್ಳದಿದ್ದರೆ 4 ಪಟ್ಟುದಂಡ

ಬೆಳಗಾವಿ,ಡಿ.29-ರಾಜಧಾನಿ ಬೆಂಗಳೂರಿನಲ್ಲಿ ಕಟ್ಟಡ ಮಾಲೀಕರು ಮಳೆ ನೀರು ಕೊಯ್ಲು ಪದ್ಧತಿ ಅಳವಡಿಕೆ ಮಾಡಿಕೊಳ್ಳದಿದ್ದರೆ, ಮೂರು ತಿಂಗಳ ನಂತರ ನಾಲ್ಕು ರಷ್ಟು ಪ್ರಮಾಣದಲ್ಲಿ ದಂಡ ಕಟ್ಟಡಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ಗುರುವಾರ ಪರಿಷತ್ತಿನ ಪ್ರಶ್ನೋತ್ತರ ಕಲಾಪ ವೇಳೆ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರು ಜಲಮಂಡಳಿ ನಿಯದ ಅನ್ವಯ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳದೆ ಇರುವ ಕಟ್ಟಡಗಳಿಗೆ ಅದರಲ್ಲೂ ವಾಸದ ಮನೆಗಳಿಗೆ ಮೊದಲ […]
ಬುಡಮೇಲಾದ ಉನ್ನತ ಶಿಕ್ಷಣ ವ್ಯವಸ್ಥೆ : ವಿಶ್ವನಾಥ್ ಆರೋಪದ ತನಿಖೆ ಯಾವಾಗ..?

ಬೆಂಗಳೂರು, ನ.27- ಬಿಜೆಪಿ ಆಡಳಿತದಲ್ಲಿ ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣಗಳ ವ್ಯವಸ್ಥೆ ಬುಡಮೇಲಾಗಿದೆ ಎಂದು ಅವರದ್ದೇ ಪಕ್ಷದ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ. ಪ್ರತಿ ಉಪಕುಲಪತಿ ನೇಮಕಕ್ಕೆ ಐದರಿಂದ ಆರು ಕೋಟಿ ವಸೂಲಿ ಮಾಡುತ್ತಿರುವುದಾಗಿ ಹೇಳಲಾಗಿದೆ. ಇದರ ವಿರುದ್ಧ ತನಿಖೆ ಯಾವಾಗ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಎಚ್.ವಿಶ್ವನಾಥ್ ಪತ್ರಿಕಾಗೋಷ್ಠಿಯ ಹೇಳಿಕೆ ವಿಡಿಯೋವನ್ನು ಲಗತ್ತಿಸಲಾಗಿದೆ. ವಿಡಿಯೋದಲ್ಲಿ ಎಚ್. ವಿಶ್ವನಾಥ್, ರಾಜ್ಯದಲ್ಲಿ ಶಾಲಾ ಶಿಕ್ಷಣ ಹಾಳಾಗುತ್ತಿದೆ, ಶೌಚಾಲಾಯ, ಕಾಂಪೊಂಡ್ ನಿರ್ಮಾಣ ಮಾಡಿ, ಶಿಕ್ಷಕರ ನೇಮಕ ಮಾಡಿ ಎಂದರೆ ಬಣ್ಣ […]
ಪಡಿತರ ವ್ಯವಸ್ಥೆಯಡಿ ಕುಚಲಕ್ಕಿ ವಿತರಣೆ : ಶ್ರೀನಿವಾಸ ಪೂಜಾರಿ

ಬೆಂಗಳೂರ,ನ.10- ಕರಾವಳಿ ಭಾಗದ ಮೂರು ಜಿಲ್ಲೆಗಳಲ್ಲಿ ಪಡಿತರ ವ್ಯವಸ್ಥೆಯಡಿ ಕುಚಲಕ್ಕಿ ನೀಡಲು ಡಿಸೆಂಬರ್ 1ರಿಂದ ಖರೀದಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬೆಂಬಲ ಬೆಲೆಯಡಿ ಭತ್ತ ಖರೀದಿಸಲು ಪ್ರತಿ ಕ್ವಿಂಟಾಲ್‍ಗೆ 2040ರೂ. ನಿಗದಿಪಡಿಸಿದೆ. ಈ ದರಕ್ಕೆ ರೈತರು ಭತ್ತ ನೀಡುತ್ತಿಲ್ಲ. ಹೀಗಾಗಿ ಪ್ರತಿ ಕ್ವಿಂಟಾಲ್‍ಗೆ ರಾಜ್ಯ ಸರ್ಕಾರದಿಂದ 500ರೂ. ಹೆಚ್ಚುವರಿ ನೀಡಿ 2540ರೂ.ಗೆ ಒಂದು ಕ್ವಿಂಟಾಲ್ […]
ದಸರಾ ಪ್ರವಾಸಿಗರಿಗೆ ಏಕೀಕೃತ ಟಿಕೆಟ್ ವ್ಯವಸ್ಥೆ
ಮೈಸೂರು,ಸೆ.19- ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ ಏಕೀಕೃತ ಟಿಕೆಟ್ (ಕಾಂಬೋ ಟಿಕೆಟ್) ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಏಕೀಕೃತ ಟಿಕೆಟ್ ಪಡೆಯುವುದರಿಂದ ಪ್ರವಾಸಿಗರು ಹಾಗೂ ಸಾರ್ವಜನಿಕರು 5 ಪ್ರವಾಸಿ ಸ್ಥಳಗಳಾದ ಮೈಸೂರು ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ರೈಲ್ವೆ ಮ್ಯೂಸಿಯಂ ಹಾಗೂ ಕೆಆರ್ ಎಸ್ ಬೃಂದಾವನಕ್ಕೆ ತೆರಳಬಹುದು.ಪ್ರವಾಸಿಗರು ಈ ಏಕೀಕೃತ ಟಿಕೆಟ್ ಪಡೆಯುವುದರಿಂದ ಟಿಕೆಟ್‍ಗಾಗಿ ಸರದಿ ಸಾಲಿನಲ್ಲಿ ನಿಲ್ಲುವ ಅಗತ್ಯವಿರುವುದಿಲ್ಲ. ಒಂದೇ ಟಿಕೆಟ್‍ನಲ್ಲಿ 5 ಸ್ಥಳಗಳಲ್ಲಿ ಪ್ರವಾಸ ಮಾಡಬಹುದು. ಇದನ್ನೂ […]