ಗಣರಾಜ್ಯೋತ್ಸವ ಸ್ತಬ್ಧ ಚಿತ್ರ ಪ್ರದರ್ಶನದಲ್ಲಿ ಕರ್ನಾಟಕ ದಾಖಲೆ

ನವದೆಹಲಿ,ಜ.26- ಗಣರಾಜ್ಯೋತ್ಸವದ ವೇಳೆ ನಡೆಯುವ ಸ್ತಬ್ಧ ಚಿತ್ರ ಪ್ರದರ್ಶನದಲ್ಲಿ ಸತತ 14 ವರ್ಷ ಪಾಲ್ಗೊಳ್ಳುವ ಮೂಲಕ ಕರ್ನಾಟಕ ಹೊಸ ದಾಖಲೆ ಬರೆದಿದೆ. ಯಾವುದೇ ರಾಜ್ಯ ಇಷ್ಟು ವರ್ಷಗಳ ಕಾಲ ಸತತವಾಗಿ 14 ವರ್ಷ ಭಾಗಿಯಾಗಿರುವ ನಿದರ್ಶನಗಳು ಇಲ್ಲ. 2009ರಿಂದ 2023ರವರೆಗೂ ನಿರಂತರವಾಗಿ ಸ್ತಬ್ಧ ಚಿತ್ರದಲ್ಲಿ ಭಾಗಿಯಾಗುವ ಅವಕಾಶವನ್ನು ಉಳಿಸಿಕೊಂಡಿರುವ ಏಕೈಕ ರಾಜ್ಯ ಕರ್ನಾಟಕವಾಗಿದೆ. ಅತ್ಯುತ್ತಮ ಸ್ತಬ್ಧ ಚಿತ್ರ ಪ್ರದರ್ಶನಕ್ಕಾಗಿ ಕೆಲವು ಬಾರಿ ರಾಜ್ಯಕ್ಕೆ ಪ್ರಥಮ ಪ್ರಶಸ್ತಿ ಬಂದಿದ್ದರೆ, ಉಳಿದ ಸಂದರ್ಭದಲ್ಲಿ ದ್ವಿತೀಯ ಪ್ರಶಸ್ತಿಯೂ ದಕ್ಕಿದೆ. ಇದೇ ಮೊದಲ […]