ಸಚಿವರ ಕಾರಿನ ಮೇಲೆ ಪಾದರಕ್ಷೆ ಎಸೆದ ಪ್ರಕರಣ : ಕ್ಷಮೆಯಾಚಿಸಿದ ಬಿಜೆಪಿ

ಚೆನ್ನೈ,ಆ.14-ತಮಿಳುನಾಡಿನ ಸಚಿವ ಪಳನಿವೇಲು ತಂಗರಾಜನ್ ಅವರ ಕಾರಿನ ಮೇಲೆ ತಮ್ಮ ಪಕ್ಷದ ಕಾರ್ಯಕರ್ತರು ಪಾದರಕ್ಷೆ ತೂರಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಕ್ಷಮೆಯಾಚಿಸಿದೆ. ನಿನ್ನೆ ಮಧುರೈನ ವಿಮಾನ ನಿಲ್ದಾಣದಲ್ಲಿ ಹಲವಾರು ಬಿಜೆಪಿ ಕಾರ್ಯಕರ್ತರು ಸಚಿವರ ಕಾರಿನ ಮೇಲೆ ಚಪ್ಪಲಿ ತೂರಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಐವರನ್ನು ಬಂಸಲಾಗಿದೆ. ಇಂದು ಬೆಳಗ್ಗೆ ಮಧುರೈನ ಬಿಜೆಪಿ ಜಿಲ್ಲಾಧ್ಯಕ್ಷ ಶರವಣನ್ ಅವರು ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ನಿನ್ನೆಯ ಘಟನೆ ನನ್ನನ್ನು ಘಾಸಿಗೊಳಿಸಿದೆ. ನಿನ್ನೆ ರಾತ್ರಿಯೇ ನಾನು ಹಣಕಾಸು ಸಚಿವರನ್ನು ಭೇಟಿ […]