ತಮಿಳುನಾಡಿನಲ್ಲಿ ನಡೆಯಿತು ಏಷ್ಯಾದ ಮೊದಲ ಮೆಟಾವರ್ಸ್ ಮದುವೆ ಅರತಕ್ಷತೆ

ಚೆನ್ನೈ, ಫೆ.8- ಕೊರೊನಾ ಹೊಸ ಹೊಸ ಸಾಧ್ಯತೆಗಳ ಅನ್ವೇಷಣೆಗೆ ಅವಕಾಶ ಮಾಡಿಕೊಟ್ಟಿದ್ದು, ತಮಿಳುನಾಡಿನ ಜೊಡಿಯೊಂದು ತಮ್ಮ ಮದುವೆಯ ನಂತರದ ಅರತಕ್ಷತೆಯನ್ನು ಆಧುನಿಕ ತಂತ್ರಜ್ಞಾನ ಮೆಟಾವರ್ಸ್ ಬಳಕೆ ಮಾಡಿ ಆನ್‍ಲೈನ್‍ನಲ್ಲೇ ಮಾಡಿಕೊಂಡಿದೆ. ಮದ್ರಾಸ್‍ನ ಐಐಟಿನಲ್ಲಿ ಪ್ರಾಜೆಕ್ಟ್ ಅಸೋಸಿಯೇಟ್ ಆಗಿರುವ 25 ವರ್ಷದ ದಿನೇಶ್ ಎಸ್.ಪಿ. ಮತ್ತು ಜನಗನಂನಿ ರಾಮಸಾಮಿ ಅವರು ಫೆಬ್ರವರಿ 6ರಂದು ವಿವಾಹವಾಗಿದ್ದರು. ತಮ್ಮ ಮದುವೆಯ ಅರತಕ್ಷತೆಗೆ ಬಂಧು ಬಳಗ, ಸ್ನೇಹಿತರನ್ನು ಕರೆಯಲು ನಿರ್ಧರಿಸಿದ್ದರು. ಆದರೆ ಕೊರೊನಾ ಮೂರನೆ ಅಲೆ ಹೆಚ್ಚಿದ್ದ ಕಾರಣ ಮದುವೆ ಸಮಾರಂಭಗಳಿಗೆ ನಿರ್ಬಂಧಗಳಿದ್ದವು. […]