ಅಗತ್ಯ ವಸ್ತುಗಳ ಮೇಲೆ ಹೊಸ ತೆರಿಗೆ ವಿಧಿಸಿಲ್ಲ : ನಿರ್ಮಲಾ

ನವದೆಹಲಿ,ಜ.16- ನಾನು ಕೂಡ ಮಧ್ಯಮ ವರ್ಗದ ಕುಟುಂಬದಿಂದ ಬಂದಳು. ಹೀಗಾಗಿ ಕಷ್ಟ ,ಒತ್ತಡದ ಬಗ್ಗೆ ನನಗೂ ಅರ್ಥವಾಗುತ್ತದೆ ಪ್ರಸ್ತುತ ಸರ್ಕಾರವು ಅಗತ್ಯವಸ್ತುಗಳ ಮೇಲೆ ಯಾವುದೇ ಹೊಸ ತೆರಿಗೆಗಳನ್ನು ವಿಧಿಸಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ. ನಿರ್ಮಲ ಸೀತಾರಾಮನ್ ಅವರು ಫೆ.1 ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದು ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸುವ ಮೂಲಕ ಮಧ್ಯಮ ವರ್ಗದ ತೆರಿಗೆದಾರರಿಗೆ ಉಡುಗೊರೆ ನೀಡುವ ನಿರೀಕ್ಷೆ ನಡುವೆ ಈ ಭರವಸೆ ಕುತೂಹಲ ಮೂಡಿಸಿದೆ. […]