ಭಾರತೀಯ ಸಂಶೋಧನೆಗಳಿಂದ ಜಾಗತಿಕ ತಂತ್ರಜ್ಞಾನದ ಅಧಿಪತ್ಯ ಸಾಧನೆ : ಪ್ರಧಾನಿ

ನವದೆಹಲಿ,ಆ.15- ಜೈವಾನ್, ಜೈಕಿಸಾನ್ ಜೊತೆ ಜೈ ಅನುಸಂಧಾನ್ ಮಂತ್ರ ಪಠಿಸಿದ ಪ್ರಧಾನಿ ನರೇಂದ್ರಮೋದಿ ಅವರು, ಸಂಶೋಧನೆಗೆ ಆದ್ಯತೆ ನೀಡುವ ಮೂಲಕ ಭವಿಷ್ಯದ ದಿನಗಳಲ್ಲಿ ಭಾರತ ಜಾಗತಿಕ ತಂತ್ರಜ್ಞಾನದ ಅಧಿಪತ್ಯ ವಹಿಸಲು ನಾಂದಿಯಾಡಿದ್ದಾರೆ. ದೆಹಲಿಯ ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ಪಂಚಸೂತ್ರಗಳನ್ನು ಪ್ರತಿಪಾದಿಸಿದರು. ಸರ್ಕಾರ ವಿದ್ಯುತ್ ಪೂರೈಸುತ್ತದೆ. ಜನ ವಿದ್ಯುತ್ ಉಳಿತಾಯದ ಜವಾಬ್ದಾರಿಯನ್ನು ನಿಭಾಯಿಸಬೇಕು. ರೈತರ ಕೃಷಿಗೆ ನೀರು ಒದಗಿಸುತ್ತದೆ, ನೀರಿನ ಮಿತವ್ಯಯದ ಜವಾಬ್ದಾರಿಯನ್ನು ನಿಭಾಯಿಸುತ್ತದೆ. ಜನಸಾಮಾನ್ಯರು, ಜನಪ್ರತಿನಿಧಿಗಳು ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು […]