ರುದ್ರಪ್ರಯಾಗ, ತೆಹ್ರಿಗಳಲ್ಲಿ ಹೆಚ್ಚು ಭೂ ಕುಸಿತ ಸಂಭವಿಸಲಿವೆಯಂತೆ

ನವದೆಹಲಿ,ಮಾ.10-ದೇಶದಲ್ಲಿ ಉತ್ತರಾಖಂಡದ ರುದ್ರಪ್ರಯಾಗ ಮತ್ತು ತೆಹ್ರಿ ಗರ್ವಾಲ್ ಜಿಲ್ಲೆಗಳು ಅತಿ ಹೆಚ್ಚು ಭೂ ಕುಸಿತದ ಸಾಂದ್ರತೆ ಹೊಂದಿರುವ ಪ್ರದೇಶಗಳಾಗಿವೆ ಎಂದು ಇಸ್ರೋ ಉಪಗ್ರಹ ಮಾಹಿತಿಯಿಂದ ತಿಳಿದುಬಂದಿದೆ. ಹೈದರಾಬಾದ್ ಮೂಲದ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್‍ನ ವಿಜ್ಞಾನಿಗಳ ತಂಡ ಮಾಡಿದ ಇತ್ತೀಚಿನ ಅಪಾಯದ ಮೌಲ್ಯಮಾಪನದಿಂದ ಈ ಈ ಅಂಶ ಪತ್ತೆಯಾಗಿದೆ. ದೇಶದ 17 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ 147 ಅತಿ ಹೆಚ್ಚು ಭೂಕುಸಿತ-ದುರ್ಬಲ ಜಿಲ್ಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಇದು ಉತ್ತರಾಖಂಡದ ಎಲ್ಲಾ 13 ಜಿಲ್ಲೆಗಳನ್ನು […]