ದೇವಾಲಯ ಸ್ವತಂತ್ರಗೊಳಿಸುವ ಕಾಯ್ದೆ ಹಿಂಪಡೆಯಲು ಅರ್ಚಕರ ನಿಯೋಗ ಒತ್ತಾಯ

ಬೆಂಗಳೂರು, ಜ.7- ಹಿಂದೂ ದೇವಾಲಯಗಳನ್ನು ಸ್ವತಂತ್ರಗೊಳಿಸಲು ರಾಜ್ಯ ಸರ್ಕಾರ ತನ್ನ ತೀರ್ಮಾನವನ್ನು ಪುನರ್ ಪರಿಶೀಲಿಸಲು ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ಅಖಿಲ ಕರ್ನಾಟಕ ಹಿಂದೂ ದೇವಾಲಯದ ಅರ್ಚಕರ -ಆಗಮಿಕರ ಮತ್ತು ಉಪಾವಂತರ ಒಕ್ಕೂಟ ಮನವಿ ಮಾಡಿದೆ. ಒಕ್ಕೂಟದ ಗೌರವಾಧ್ಯಕ್ಷ ಆರ್.ಲಕ್ಷ್ಮೀಕಾಂತ್, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್. ದೀಕ್ಷಿತ್ ಅವರ ನಿಯೋಗವು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು. ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಹೊಸ ಕಾಯ್ದೆಯು ಅನುಕೂಲಕ್ಕಿಂತ ಅನಾನುಕೂಲವನ್ನು ಸೃಷ್ಟಿಸಲಿದೆ. ಈ ಕಾಯ್ದೆಯನ್ನು […]