ಕೆಎಸ್‍ಡಿಎಲ್ ಟೆಂಡರ್ ಹಗರಣ : ತನಿಖಾಕಾಧಿರಿಗಳ ಬದಲಾವಣೆ

ಬೆಂಗಳೂರು,ಮಾ.7- ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣವನ್ನು ಬೇಧಿಸಿದ್ದ ಲೋಕಾಯುಕ್ತ ಸಂಸ್ಥೆಯ ಇಬ್ಬರು ತನಿಖಾಕಾಧಿರಿಗಳನ್ನು ಏಕಾಏಕಿ ಬದಲಾಯಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಲೋಕಾಯುಕ್ತ ಡಿವೈಎಸ್ಪಿ ಪ್ರಮೋದ್ ಕುಮಾರ್ ಹಾಗೂ ಇನ್‍ಸ್ಪೆಕ್ಟರ್ ಕುಮಾರಸ್ವಾಮಿ ಅವರುಗಳನ್ನು ದಿಢೀರನೆ ವರ್ಗಾವಣೆ ಮಾಡಿ ಬೇರೊಬ್ಬರಿಗೆ ತನಿಖೆಯ ನೇತೃತ್ವ ವಹಿಸಿರುವುದು ಗುಮಾನಿಗೆ ಎಡೆ ಮಾಡಿಕೊಟ್ಟಿದೆ. 40ಲಕ್ಷ ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಹಾಗೂ ಮನೆಯಲ್ಲಿ 8ಕೋಟಿ ರೂ. ಅಧಿಕ ಹಣ ಸಿಕ್ಕಿದ್ದರ ಕುರಿತು ಲೋಕಾಯುಕ್ತ ತನಿಖೆ ಚುರುಕುಗೊಂಡಿದೆ. ಆದರೆ ಇದರ ಮಧ್ಯೆ ಪ್ರಕರಣದ […]

ಸಿಎಂ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು,ಮಾ.7- ಕೆಎಸ್‍ಡಿಎಲ್ ಟೆಂಡರ್ ಹಗರಣದಲ್ಲಿ ಲೋಕಾಯುಕ್ತ ದಾಳಿಗೆ ಒಳಗಾಗಿ ತಲೆ ಮರೆಸಿಕೊಂಡಿರುವ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರನ್ನು ಬಿಜೆಪಿ ಸರ್ಕಾರ ರಕ್ಷಣೆ ಮಾಡುತ್ತಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು. ಕೆಪಿಸಿಸಿ ಕಚೇರಿಯಲ್ಲಿಂದು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಸಕ ಮಾಡಾಳ್ ವಿರುಪಾಕ್ಷಪ್ಪ ಮನೆಯ ಮೇಲೆ ಲೋಕಾಯುಕ್ತ ದಾಳಿ ನಡೆಸಿದಾಗ ಅವರ ಪುತ್ರ ಪ್ರಶಾಂತ್ ಮಾಡಾಳು ಬಳಿ ಎಂಟು ಕೋಟಿ ರೂಪಾಯಿ ಪತ್ತೆಯಾಗಿದೆ. ಇದು ಶೇ.40 ಭ್ರಷ್ಟಾಚಾರಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ಪ್ರಕರಣದ […]

ಕಸಗುಡಿಸಿ, ಟಾಯ್ಲೆಟ್ ಕ್ಲೀನ್ ಮಾಡಲು 70 ಲಕ್ಷ ರೂ.ಗಳ ಟೆಂಡರ್ !

ಬೆಂಗಳೂರು,ಫೆ.8- ಸಿಲಿಕಾನ್ ಸಿಟಿಯಲ್ಲಿ ಕಸಗುಡಿಸಿ, ಟಾಯ್ಲೆಟ್ ಕ್ಲೀನ್ ಮಾಡಲು ಲಕ್ಷ ಲಕ್ಷ ಹಣ ಬೇಕು. ಇದೆನಪ್ಪಾ ಕಸ ಗುಡಿಸಲು ಲಕ್ಷ ಲಕ್ಷ ಹಣ ಬೇಕು ಅಂತಿದ್ದರಲ್ಲಾ ಎಂದು ನೀವು ಹುಬ್ಬೇರಿಸಬೇಡಿ.ಇಂತಹ ಪರಮಾದ್ಭುತಗಳು ನಡೆಯುವುದು ಕೇವಲ ಬಿಬಿಎಂಪಿಯಲ್ಲಿ ಮಾತ್ರ. ಸಾರ್ವಜನಿಕರ ತೆರಿಗೆ ಹಣದಲ್ಲಿ ಹಗಲು ದರೋಡೆ ಮಾಡಲು ಮುಂದಾಗಿರುವ ಬಿಬಿಎಂಪಿ ಅಧಿಕಾರಿಗಳು ಕಸ ಗುಡಿಸುವ ಹಾಗೂ ಬಾತ್ ರೂಂ ಕ್ಲಿನಿಂಗ್ ಮಾಡುವ ಕೆಲಸಕ್ಕೆ ಬರೊಬ್ಬರಿ 70 ಲಕ್ಷ ರೂ.ಗಳ ಟೆಂಡರ್ ಕರೆದಿದ್ದಾರೆ. ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಕಸಗುಡಿಸಿ. […]

ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ಟೆಂಡರ್ ಆಹ್ವಾನ

ಬೆಂಗಳೂರು,ಜ.27- ಕರ್ನಾಟಕ-ರೈಲು ಮೂಲಸೌಕರ್ಯ ಅಭಿವೃದ್ಧಿ ಎಂಟರ್‌ಪ್ರೈಸಸ್ (ಕೆ-ಆರ್‍ಐಡಿಇ) 15,767 ಕೋಟಿ ರೂಪಾಯಿ ವೆಚ್ಚದ ಬೆಂಗಳೂರು ಉಪನಗರ ರೈಲ್ವೆ ಯೋಜನೆಯ ಎರಡನೇ ಹಂತದ ಟೆಂಡರ್‍ಗೆ ಆಹ್ವಾನ ನೀಡಿದೆ. 2ನೇ ಹಂತದಲ್ಲಿ ಹೀಲಲಿಗೆಯಿಂದ ರಾಜಾನುಕುಂಟೆಗೆ ಸಂಪರ್ಕ ಕಲ್ಪಿಸುವ 4ನೇ ಕಾರಿಡಾರ್‍ನ ಕಾಮಗಾರಿ ಅನುಷ್ಠಾನಕ್ಕೆ ಟೆಂಡರ್‍ಗೆ ಆಹ್ವಾನ ನೀಡಲಾಗಿದೆ. 148 ಕಿಮೀ ಯೋಜನೆಯ 46.8 ಕಿಮೀ ಉದ್ದದ ಯಲಹಂಕ (ಕಾರಿಡಾರ್-4) ಮೂಲಕ ಹೀಲಲಿಗೆ-ರಾಜನಕುಂಟೆ ನಡುವಿನ ಕನಕ ಮಾರ್ಗದ ಸಿವಿಲ್ ಕಾಮಗಾರಿಯನ್ನು ಈ ಟೆಂಡರ್ ಒಳಗೊಂಡಿದೆ. ಏಪ್ರಿಲ್ 27 ಟೆಂಡರ್‍ಗೆ ಬಿಡ್ ಸಲ್ಲಿಸಲು […]

ಅಕ್ರಮದ ನಡುವೆಯೆ ‘ಚಿಲುಮೆ’ಯಿಂದ ಟೆಂಡರ್ ಲಾಬಿ

ಬೆಂಗಳೂರು, ನ.25- ಮತದಾರರ ಪಟ್ಟಿ ಅಕ್ರಮ ಪ್ರಕರಣದಲ್ಲಿ ಟೀಕೆಗೆ ಗುರಿಯಾಗಿರುವ ಚಿಲುಮೆ ಸಂಸ್ಥೆ ತನ್ನ ಮೇಲಿನ ಆರೋಪದ ಹೊರತಾಗಿಯೂ ಮತ್ತೊಂದು ಟೆಂಡರ್ ಪಡೆಯಲು ಲಾಬಿ ನಡೆಸಿರುವುದು ಬೆಳಕಿಗೆ ಬಂದಿದೆ.ಬಿಬಿಎಂಪಿ ವತಿಯಿಂದ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಕಲ್ಯಾಣ ಸಮಿತಿ ವಿಭಾಗ ಈ ಕುರಿತು ಟೆಂಡರ್ ಅನ್ನು ಆಹ್ವಾನಿಸಿದೆ. ಚಿಲುಮೆ ಸಂಸ್ಥೆ ಟೆಂಡರ್ ಗೆ ಬಿಡ್ ಸಲ್ಲಿಸಿದ್ದು, ಗುತ್ತಿಗೆ ಪಡೆದುಕೊಳ್ಳಲು ಹರಸಾಹಸ ನಡೆಸಿದೆ. ಬಿಬಿಎಂಪಿ ಮುಖ್ಯ ಆಯುಕ್ತರೂ ಸೇರಿದಂತೆ ಭಾರಿ ಪ್ರಭಾವ ಬಳಸಿ ಟೆಂಡರ್ ಗಿಟ್ಟಿಸುವ ಯತ್ನ […]

ಆನಂದರಾವ್ ವೃತ್ತದ ಬಳಿ ಬೃಹತ್ ಅವಳಿ ಗೋಪುರ ನಿರ್ಮಾಣ

ಬೆಂಗಳೂರು,ನ.19- ನಗರದಲ್ಲಿ ಬಾಡಿಗೆ ಕಟ್ಟಡಗಳಲ್ಲಿರುವ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ 25 ಮಹಡಿಗಳ ಅವಳಿ ಗೋಪುರ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ವಿಕಾಸ ಸೌಧದ ಪಕ್ಕದಲ್ಲಿರುವ ಬಹುಮಹಡಿ ಕಟ್ಟಡ, ಶಾಂತಿನಗರದ ಬಿಎಂಟಿಸಿ ಟರ್ಮಿನಸ್, ಕೋರಮಂಗಲದ ಕೇಂದ್ರೀಯ ಸದನ್, ವಿವಿ ಟವರ್ಸ್, ಆನಂದ್ ರಾವ್ ಸರ್ಕಲ್ ಫ್ಲೈಓವರ್ ಬಳಿ ಸೇರಿದಂತೆ ವಿವಿಧೆಡೆ ಸರ್ಕಾರಿ ಕಚೇರಿಗಳಿವೆ. ಈ ಎಲ್ಲಾ ಸರ್ಕಾರಿ ಕಚೇರಿಗಳನ್ನು ಒಂದೇ ಸ್ಥಳದಲ್ಲಿ ತರಲು 2020 ರಲ್ಲಿ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವಳಿ ಗೋಪುರ ಪ್ರಸ್ತಾವನೆ ತರಲಾಗಿತ್ತು. […]