ತೀವ್ರ ಸ್ವರೂಪಕ್ಕೆ ತಿರುಗಿದ ಇಸ್ರೇಲಿಗಳ ಪ್ರತಿಭಟನೆ

ಟೆಲ್ ಅವಿವ್ (ಇಸ್ರೇಲ್),ಫೆ.12- ಬೆಂಜಮಿನ್ ನೆತನ್ಯಾಹು ಅವರ ಸರ್ಕಾರದ ವಿರುದ್ಧ ಇಸ್ರೇಲಿಗಳು ತಿರುಗಿ ಬಿದಿದ್ದು, ದೇಶಾದ್ಯಂತ ಹಲವು ನಗರಗಳಲ್ಲಿ ಹತ್ತು ಸಾವಿರಕ್ಕು ಹೆಚ್ಚು ಮಂದಿ ಪ್ರತಿಭಟನೆ ನಡೆಸಿ, ಆಕ್ರೋಶವನ್ನು ತೀವ್ರಗೊಳಿಸಿವೆ. ಇಸ್ರೇಲ್ ಸರ್ಕಾರ ರೂಪಿಸಿರುವ ಹೊಸ ನಿಯಮಾವಳಿಗಳು ಸುಪ್ರೀಂಕೋರ್ಟ್ ಅನ್ನು ದುರ್ಬಲಗೊಳಿಸುತ್ತವೆ. ನ್ಯಾಯಾಂಗ ಮೇಲ್ವಿಚಾರಣೆ ಮಿತಿ ವಿಧಿಸಿವೆ. ನ್ಯಾಯಾಂಗವನ್ನು ದುರ್ಬಲಗೊಳಿಸಿ ರಾಜಕಾರಣಿಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡಲಾಗುತ್ತಿದೆ ಎಂದು ಎಂದು ವಿಮರ್ಶೆಗಳು ನಡೆದಿವೆ. ಇದರಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತದೆ ಎಂದು ಸಿಟ್ಟಾಗಿರುವ ಜನ ಬೀದಿ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಸಂಸತ್‍ನಲ್ಲಿ ಮಂಡಿಸಲಾಗಿರುವ […]