ಗರ್ಭ ಮುಂದುವರೆಸುವ, ತೆಗೆಸುವ ಅಧಿಕಾರ ಮಹಿಳೆಗೆ ಮಾತ್ರ ಸೇರಿದೆ : ಬಾಂಬೆ ಹೈಕೋರ್ಟ್

ಮುಂಬೈ,ಜ.23- ಗರ್ಭವನ್ನು ಮುಂದುವರಿಸಬೇಕೆ ಅಥವಾ ಬೇಡವೇ ಎಂಬ ನಿರ್ಧಾರ ಕೈಗೊಳ್ಳುವ ಹಕ್ಕು ಮಹಿಳೆಗೆ ಮಾತ್ರವಿದ್ದು, ಆಕೆ ಮಾತ್ರ ಅದನ್ನು ನಿರ್ಧರಿಸಬೇಕು ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ. ಅಸಹಜತೆಯಿಂದ ಕೂಡಿದ ತನ್ನ 32 ವಾರಗಳ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ವಿವಾಹಿತ ಮಹಿಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಮತ್ತು ಎಸ್.ಜಿ.ಡಿಗೆ ಅವರ ವಿಭಾಗೀಯ ಪೀಠ ತೀರ್ಪು ನೀಡಿದೆ. ಗರ್ಭೀಣಿ ಮಹಿಳೆಯನ್ನು ಸೋನೋಗ್ರಫಿಗೆ ಒಳಪಡಿಸಿದಾಗ ಭ್ರೂಣವು ಅಸಹಜತೆಗಳನ್ನು ಹೊಂದಿದ್ದು, ದೈಹಿಕ ಮತ್ತು ಮಾನಸಿಕ ವಿಕಲಾಂಗತೆಯೊಂದಿಗೆ […]