ನಿಷೇಧಿತ ಅಸಂಸದೀಯ ಪದಗಳ ಪರಿಷ್ಕೃತ ಪಟ್ಟಿ ರಿಲೀಸ್ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ, ಜು.14- ಪ್ರಜಾಪ್ರಭುತ್ವದಲ್ಲಿ ಟೀಕೆ, ಪ್ರತಿಭಟನೆ, ಆರೋಪಗಳು ಸರ್ವೆ ಸಾಮಾನ್ಯ. ಈ ಮೊದಲು ಕೋವಿಡ್ ನೆಪದಲ್ಲಿದೇಶಾದ್ಯಂತ ಪ್ರತಿಭಟನೆಗಳನ್ನು ಹತ್ತಿಕ್ಕಲಾಗಿತ್ತು. ಕಟುಟೀಕೆ ಮಾಡುವವರನ್ನು ದೇಶ ದ್ರೋಹದ ಆರೋಪದ ಮೇಲೆ ಜೈಲಿಗಟ್ಟಲಾಗಿತ್ತು. ಈಗ ಹೊಸದಾಗಿ ಸಂಸತ್‍ನಲ್ಲೂ ಅಸಂಸದೀಯ ಪದಗಳ ಪರಿಷ್ಕøತ ಪಟ್ಟಿ ಬಿಡುಗಡೆ ಮಾಡುವ ಮೂಲಕ ಪ್ರತಿಪಕ್ಷಗಳ ಬಾಯಿ ಮುಚ್ಚಿಸುವ ಯತ್ನ ನಡೆದಿದೆ. ಜುಲೈ 18ರಿಂದ ಆರಂಭವಾಗುವ ಸಂಸತ್ ಕಲಾಪ ಕುರಿತು ಕಿರು ಹೊತ್ತಿಗೆ ಬಿಡುಗಡೆ ಮಾಡಿರುವ ಲೋಕಸಭಾ ಸಚಿವಾಲಯ ಅಸಂಸದೀಯ ಪದಗಳ ಉದ್ದನೆಯ ಪಟ್ಟಿಯನ್ನು ಪ್ರಕಟಿಸಿದೆ. ಅದರ ಪ್ರಕಾರ […]