ಮೋದಿ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ ; ಠಾಕೂರ್

ನವದೆಹಲಿ,ಡಿ.19- ದೇಶದಲ್ಲಿ ಮೋದಿ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಶೇ.168 ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅಭಿಪ್ರಾಯಪಟ್ಟಿದ್ದಾರೆ. ಮೋದಿ ಸರ್ಕಾರ ಭಯೋತ್ಪಾದನೆ ಬಗ್ಗೆ ಶೂನ್ಯ ಸಹಿಷ್ಣುತೆ ಅನುಸರಿಸುತ್ತಿರುವುದರಿಂದ ಕಣಿವೆಯಲ್ಲಿ ಇಂತಹ ಸನ್ನಿವೇಶ ನಿರ್ಮಾಣವಾಗಿದೆ. ಇದರ ಜತೆಗೆ ಎಡಪಂಥಿಯ ಉಗ್ರವಾದ ಕೃತ್ಯಗಳು ಶೇ.265ರಷ್ಟಿದೆ ಎಂದು ಅವರು ಹೇಳಿದ್ದಾರೆ. 2014ರಿಂದ ಕಾಶ್ಮೀರದಲ್ಲಿ ಶೇ.80ರಷ್ಟು ದಂಗೆಗಳು ಕಡಿಮೆಯಾಗಿದೆ. ನಾಗರಿಕ ಸಾವುಗಳು ಶೇ.89ರಷ್ಟು ಕಡಿಮೆಯಾಗಿದೆ ಸುಮಾರು 6 ಸಾವಿರ ಉಗ್ರರು ಶರಣಾಗಿದ್ದಾರೆ […]