ಉಗ್ರನನ್ನು ಬಂಧಿಸಿ ಅನಾಹುತ ತಡೆಯುವಲ್ಲಿ ಪೊಲೀಸರು ಯಶಸ್ವಿ : ಜ್ಞಾನೇಂದ್ರ

ನವದೆಹಲಿ,ಜು.25-  ಉಗ್ರ ಸಂಘಟನೆಗೆ ಸೇರಿದವನೆಂಬ ಶಂಕೆಯ ಮೇರೆಗೆ ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಉಗ್ರನೊಬ್ಬನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸ್ಸಾಂ ಮೂಲದ ಅಖ್ತರ್ ಎಂಬ ಶಂಕಿತ ಉಗ್ರನನ್ನು ತಿಲಕ್‍ನಗರದ ಬಿಪಿಟಿ ಪ್ರದೇಶದಲ್ಲಿ ಸಿಸಿಬಿ ಪೊಲೀಸರು ಬಂಧಿಸಿ  ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಗುಪ್ತಚರ ವಿಭಾಗದ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿಸಿದರು. ಶಂಕಿತ ಉಗ್ರನ ಜೊತೆಗೆ ಆತನ ಜೊತೆಯಲ್ಲಿದ್ದ ಇತರೆ ಮೂವರನ್ನು ಸಹ ಬಂಧಿಸಿ […]