ಆಫ್ಘಾನಿಸ್ತಾನದಲ್ಲಿ ಉಗ್ರರಿಗೆ ಹೈಟೆಕ್ ಟ್ರೈನಿಂಗ್, ವಿಶ್ವಕ್ಕೆ ಕಾದಿದೆ ಆತಂಕ..!

ನವದೆಹಲಿ, ಫೆ.6- ಅಂತರ ರಾಷ್ಟ್ರೀಯ ಸಮುದಾಯದ ಎಚ್ಚರಿಕೆಯ ನಡುವೆಯೂ ತಾಲಿಬಾನ್‍ಗಳ ಹಿಡಿತದಲ್ಲಿರುವ ಆಫ್ಘಾನಿಸ್ತಾನದಲ್ಲಿ ಭಯೋತ್ಪಾದನೆಗೆ ಉತ್ತೇಜನ ನೀಡುವ ಹಲವು ಬೆಳವಣಿಗೆಗಳಾಗುತ್ತಿದ್ದು, ದಿನೇ ದಿನೇ ಜಾಗತಿಕ ಮಟ್ಟದ ಬೆದರಿಕೆ ಹೆಚ್ಚಾಗುತ್ತಿದೆ. ಸುಮಾರು ಎರಡು ದಶಕಗಳ ಕಾಲ ಆಫ್ಘಾನಿಸ್ತಾನದಲ್ಲಿ ನಾಗರಿಕ ಯುದ್ಧದಲ್ಲಿ ಭಾಗಿಯಾಗಿದ್ದ ಅಮೆರಿಕಾ ಸೇನೆ ಸಂಘರ್ಷ ಸ್ಥಗಿತಗೊಳಿಸುವುದಾಗಿ ಘೋಷಿಸಿದ ಬೆನ್ನಲ್ಲೆ ತಾಲಿಬಾನ್‍ಗಳು ಕಳೆದ ವರ್ಷದ ಆಗಸ್ಟ್ 15ರಂದು ಕಾಬೂಲ್‍ಗೆ ನುಗ್ಗಿ ರಾಜಧಾನಿಯನ್ನು ವಶ ಪಡಿಸಿಕೊಂಡಿದ್ದರು. ಆಗಿನ ಅಧ್ಯಕ್ಷರು ದೇಶ ಬಿಟ್ಟು ಪರಾರಿಯಾಗಿದ್ದರು. ಸ್ಥಳೀಯ ನಾಗರಿಕರು, ವಿದೇಶಿ ಪ್ರಜೆಗಳು ಸುಮಾರು […]