ಪಠ್ಯದಲ್ಲಿ ಕನ್ನಡ ಚಿತ್ರರಂಗದ ಮೇರುನಟರ ಯಶೋಗಾತೆ ಸೇರಿಸಲು ಸಿಎಂಗೆ ಮನವಿ

ಬೆಂಗಳೂರು,ಜ.29- ಕನ್ನಡ ಚಿತ್ರರಂಗದ ಮೇರುನಟರಾದ ದಿವಂಗತ ಶಂಕರ್‍ನಾಗ್, ಡಾ.ವಿಷ್ಣುವರ್ಧನ್, ಡಾ.ಅಂಬರೀಷ್ ಹಾಗೂ ಕರ್ನಾಟಕರತ್ನ ಪುನೀತ್ ರಾಜಕುಮಾರ್ ಅವರ ಯಶೋಗಾಥೆಯನ್ನು ಶಾಲೆ ಅಥವಾ ಕಾಲೇಜು ಪಠ್ಯದಲ್ಲಿ ಸೇರ್ಪಡೆಗೊಳಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶಾಸಕ ದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಹಲವು ಮಹನೀಯರನ್ನು ತಮ್ಮ ನಟನ ಕೌಶಲ್ಯದ ಮೂಲಕ ಮತ್ತು ತಮ್ಮ ಜೀವನದ ಮೂಲಕ ಲಕ್ಷಾಂತರ ಅಭಿಮಾನಿಗಳಿಗೆ ಆದರ್ಶ ಪ್ರಾಯಾರಾಗಿ ಸಾಂಸ್ಕೃತಿಕ ಲೋಕವನ್ನು ಬೆಳಗಿದ್ದಾರೆ. ತಮ್ಮಲ್ಲಿ ನಟನ ಪ್ರೌಡಿಮೆ, ತಮ್ಮ ಜೀವನ ಶೈಲಿಯ […]