ಮುಗಿಯದ ಪಠ್ಯ ಪರಿಷ್ಕರಣೆ ಗೊಂದಲ, ಮಕ್ಕಳಿಗೆ ಸಂಕಷ್ಟ..

ಬೆಂಗಳೂರು,ಜು.15- ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿರುವ ಶಾಲಾ ಪಠ್ಯಪುಸ್ತಕ ಪರಿಷ್ಕರಣೆಯಿಂದಾಗಿ ನಾಡಿನ ಮಕ್ಕಳು ಪುಸ್ತಕಗಳಿಲ್ಲದೇ ಶಾಲೆಗೆ ತೆರಳುವ ಸ್ಥಿತಿ ಬಂದಿದೆ. ಎರಡೆರಡು ಬಾರಿ ಪಠ್ಯಪುಸ್ತಕಗಳು ಪರಿಷ್ಕರಣೆಗೊಂಡಿದ್ದು, ಮರುಪರಿಷ್ಕೃತಗೊಂಡ ಕೇವಲ ಒಂದು ಕಿರುಪುಸ್ತಕವನ್ನು ಶಾಲೆಗಳಿಗೆ ನೀಡಲಾಗುತ್ತಿದೆ. ಮರು ಪರಿಷ್ಕರಣೆಗೊಂಡ ಪುಸ್ತಕಗಳ ಮುದ್ರಣ ಇನ್ನೂ ಪ್ರಾರಂಭವಾಗಬೇಕಿದ್ದು, ಅದನ್ನು 15 ದಿನಗಳಲ್ಲಿ ಪೂರ್ಣಗೊಳಿಸಿ ಶಾಲೆಗಳಿಗೆ ವಿತರಿಸಬೇಕು ಎಂದು ಕರ್ನಾಟಕ ಪಠ್ಯಪುಸ್ತಕ ಸೊಸೈಟಿಯ ಮೂಲಗಳು ತಿಳಿಸಿವೆ. ಅಂದರೆ, ರಾಜ್ಯದ ಮಕ್ಕಳಿಗೆ ಮರು ಪರಿಷ್ಕೃತಗೊಂಡಿರುವ ಪುಸ್ತಕಗಳ ನಕಲು (ಜೆರಾಕ್ಸ್) ಪ್ರತಿಯನ್ನು ನೀಡಲಾಗುತ್ತದೆ. ರೋಹಿತ್ ಚಕ್ರತೀರ್ಥ […]