“ದೇಶದ ನಾಯಕತ್ವ ಆಯ್ಕೆಯಲ್ಲಿ ಯುವಕರ ಪಾತ್ರ ಮುಖ್ಯ” : ರಾಜ್ಯಪಾಲ ಗೆಹ್ಲೋಟ್ ಕಿವಿಮಾತು
ಬೆಂಗಳೂರು,ಜ.25- ದೇಶದ ನಾಯಕತ್ವದ ಆಯ್ಕೆಯಲ್ಲಿ ಯುವಕರು ತಮ್ಮ ಭಾಗವಹಿಸುವಿಕೆಯನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ಸಮಾಜದ ಜಾಗೃತ ಮತ್ತು ಜವಾಬ್ದಾರಿಯುತ ನಾಗರಿಕರಾಗಬೇಕೆಂದು ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಕಿವಿಮಾತು ಹೇಳಿದ್ದಾರೆ. ರಾಜ್ಯ ಚುನಾವಣಾ ಆಯೋಗದಿಂದ ಆನ್ ಲೈನ್ ಮೂಲಕ ರಾಜ್ಯಾದ್ಯಂತ ಆಯೋಜಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ವಚ್ರ್ಯುವಲ್ ಮೂಲಕ ರಾಜಭವನದಿಂದ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ನಾಗರಿಕರು ಪ್ರಜ್ಞಾಪೂರ್ವಕವಾಗಿ ಮತ ಚಲಾಯಿಸುವುದು ಮತ್ತು ಇತರರಿಗೂ ಮತದಾನ ಮಾಡಲು ಪ್ರೇರಪಿಸುವುದು ಹಾಗೂ ಯಾವ ಮತದಾರನೂ ಹೊರಗುಳಿಯಬಾರದು ಎಂಬುದೇ ನಮ್ಮ ಮಂತ್ರವಾಗಬೇಕು. […]