ಜೈಲಲ್ಲಿ ಸ್ನೇಹಿತರಾಗಿ ಹೊರಬಂದಮೇಲೆ ಕಳ್ಳತನ ಮಾಡುತ್ತಿದ್ದ ಆಸಾಮಿಗಳು ಅಂದರ್

ಬೆಂಗಳೂರು, ಜ.11- ಕಾರಾಗೃಹದಲ್ಲಿದ್ದಾಗ ಸ್ನೇಹಿತರಾಗಿ ಹೊರಬಂದ ನಂತರ ಒಟ್ಟಾಗಿ ಮನೆಗಳ್ಳತನ ಮಾಡುತ್ತಿದ್ದ ಮೂವರನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿ 16.65 ಲಕ್ಷ ರೂ. ಬೆಲೆಯ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಮೂಲತಃ ಆಂಧ್ರಪ್ರದೇಶದ ವೆಂಕಟರಮಣ, ಕೃಷ್ಣಮೂರ್ತಿ ಹಾಗೂ ಬಾಗೇಪಲ್ಲಿ ಮೂಲದ ರಮೇಶ ಬಂಧಿತರು. ಅ.11 ರಂದು ಪಿರ್ಯಾದುದಾರರು ಸ್ನಾನಕ್ಕೆ ಹೋಗುವ ಮುನ್ನ ಬಿಚ್ಚಿಟ್ಟಿದ್ದ ಚಿನ್ನದ ಸರ ಕಳ್ಳತನವಾಗಿದ್ದ ಬಗ್ಗೆ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.  ಯಾರೋ ಕಳ್ಳರು ಮನೆಯೊಳಗೆ ನುಗ್ಗಿ ಟೇಬಲ್ ಮೇಲಿಟ್ಟಿದ್ದ ಸರ ಕಳವು […]