ಕೊರೊನಾ 3ನೇ ಅಲೆ ಮುಕ್ತಾಯ..!
ಬೆಂಗಳೂರು,ಫೆ.7-ಖುಷಿಪಡುವ ವಿಚಾರ ಏನೆಂದರೆ ಇನ್ನೆರಡು ವಾರಗಳಲ್ಲಿ ಕೊರೊನಾ ಮೂರನೇ ಅಲೆ ಮುಕ್ತಾಯಗೊಳ್ಳಲಿದೆ. ಮೂರನೆ ಅಲೆ ಮುಕ್ತಾಯ ಹಂತಕ್ಕೆ ಬಂದಿದ್ದು, ಜನ ಆತಂಕಪಡುವ ಅವಶ್ಯಕತೆ ಇಲ್ಲ. ಸ್ವತಃ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಅವರೇ ಸ್ಪಷ್ಟಪಡಿಸಿದ್ದಾರೆ. ಕಳೆದ 10 ದಿನಗಳಿಂದ ಕೊರೊನಾ ಸೋಂಕಿನ ಪ್ರಮಾಣ ಕ್ಷೀಣಿಸುತ್ತಿದೆ. ಹೀಗಾಗಿ ಇನ್ನೆರಡು ವಾರಗಳಲ್ಲಿ ಸೋಂಕಿನ ಪ್ರಮಾಣ ಮತ್ತಷ್ಟು ಇಳಿಕೆಯಾಗುವುದು ಖಚಿತಪಟ್ಟಿರುವುದರಿಂದ ಮೂರನೇ ಅಲೆ ಕ್ಷೀಣಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ. ಮೂರನೇ ಅಲೆ ಕ್ಷೀಣಿಸುತ್ತಿದೆ ಅಂತಾ ಜನ ಮೈ ಮರೆಯಬಾರದು. ಇಂತಹ ಸಂದರ್ಭದಲ್ಲಿ ಸ್ವಲ್ಪ […]