ಆತ್ಮಹತ್ಯೆಗೆ ಶರಣಾದ ಅಮೆರಿಕದ ಕೋಟ್ಯಪತಿ

ವಾಷಿಂಗ್ಟನ್,ಫೆ.25-ಇಕ್ವಿಟಿ ಹೂಡಿಕೆದಾರ ಹಾಗೂ ಅಮೆರಿಕದ ಕೋಟ್ಯಪತಿಯೊಬ್ಬರು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಕೋಟ್ಯಪತಿಯನ್ನು ಖಾಸಗಿ ಇಕ್ವಿಟಿ ಹೂಡಿಕೆ ಮತ್ತು ಹತೋಟಿ ಖರೀದಿಗಳ ಪ್ರವರ್ತಕ ಎಂದು ಪರಿಗಣಿಸಲ್ಪಟ್ಟಿದ್ದ ಅಮೇರಿಕನ್ ಬಿಲಿಯನೇರ್ ಥಾಮಸ್ ಲೀ ಎಂದು ಗುರುತಿಸಲಾಗಿದೆ. 78 ವರ್ಷದ ಉದ್ಯಮಿಯು ಅವೆನ್ಯೂ ಮ್ಯಾನ್‍ಹ್ಯಾಟನ್‍ನಲ್ಲಿರುವ ತನ್ನ ಹೂಡಿಕೆ ಸಂಸ್ಥೆಯ ಪ್ರಧಾನ ಕಚೇರಿಯಲ್ಲೇ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿದ್ದ ಅವರನ್ನು ಉಳಿಸಿಕೊಳ್ಳಲು ನಡೆಸಿದ ಪ್ರಯತ್ನ ವಿಫಲವಾಯಿತು ಎಂದು […]