ಒತ್ತುವರಿ ತೆರವಿಗೆ ದಂಪತಿ ವಿರೋಧ: ಆತ್ಮಾಹುತಿ ಬೆದರಿಕೆ

ಬೆಂಗಳೂರು,ಅ.12- ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ ಮೂರನೇ ದಿನವು ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದ್ದು, ತೆರವಿಗೆ ಬಂದಿದ್ದ ಪಾಲಿಕೆ ಅಧಿಕಾರಿಗಳಿಗೆ ದಂಪತಿ ಶಾಕ್ ನೀಡಿದ್ದಾರೆ. ಮನೆ ತೆರವು ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುವು ದಾಗಿ ಬಸವನಪುರ ಮುಖ್ಯರಸ್ತೆಯ ಎಸ್‍ಆರ್‍ ಲೇಔಟ್‍ನ ಸೋನಾ ಸಿಂಗ್ ಹಾಗೂ ಸುನೀಲ್ ಸಿಂಗ್ ದಂಪತಿ ಕೈಯಲ್ಲಿ ಪೆಟ್ರೋಲ್ ಹಿಡಿದು ಮೈಮೇಲೆ ಸುರಿದುಕೊಂಡು ರಂಪಾಟ ಮಾಡಿದ್ದಾರೆ. ನಾವು ಇಲ್ಲಿಯವರೆ. ಇಲ್ಲೇ ಹುಟ್ಟಿ ಬೆಳೆದಿದ್ದೇವೆ. ಮನೆ ಕಟ್ಟುವಾಗ ಇಲ್ಲದ ರಾಜಕಾಲುವೆ ಈಗ ಎಲ್ಲಿಂದ ಬಂತು. ನಾವೇನು ಪಾಕಿಸ್ತಾನದಿಂದ ಬಂದಿದ್ದೇವಾ? […]